ETV Bharat / state

ಗ್ರಾ. ಪಂ. ಚುನಾವಣೆ : ಪ್ರತ್ಯೇಕ ವಾರ್ಡ್​ನಲ್ಲಿ ಅತ್ತೆ-ಸೊಸೆ ಸ್ಪರ್ಧೆ - Mother-in-law and daughter-in-law is contesting

ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅತ್ತೆ-ಸೊಸೆ ಇಬ್ಬರೂ ಗ್ರಾಮ ಪಂಚಾಯಿತಿಯ ಮೊದಲನೇ ಹಂತದ ಚುನಾವಣೆಗೆ ಸ್ಪರ್ಧಿಸಿ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ.

kalburagi
ಅತ್ತೆ-ಸೊಸೆ ಸ್ಪರ್ಧೆ
author img

By

Published : Dec 21, 2020, 11:39 AM IST

ಕಲಬುರಗಿ: ಗ್ರಾಮ ಪಂಚಾಯಿತಿಯ ಮೊದಲನೇ ಹಂತದ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ದಿನದಿಂದ ದಿನಕ್ಕೆ ಹಳ್ಳಿ ರಾಜಕೀಯ ಕಾವೇರತೊಡಗಿದೆ. ಎಲ್ಲಿ ನೋಡಿದರು ಕುಟುಂಬ ರಾಜಕೀಯದ ಸದ್ದು ಕೇಳಿ ಬರುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಪ್ರಾರಂಭವಾಗಿದ್ದರಿಂದ ಒಂದು ಕಡೆ ಗಂಡ-ಹೆಂಡತಿ, ಅಣ್ಣ-ತಮ್ಮಂದಿರು ಎದುರಾಳಿಗಳಾಗಿ ಸ್ಪರ್ಧಿಸಿದರೆ ಮತ್ತೊಂದು ಕಡೆ ಬೇರೆ ಬೇರೆ ವಾರ್ಡ್​ಗಳಲ್ಲಿ ಒಂದೇ ಕುಟುಂಬದ ಸದಸ್ಯರು ಹೆಚ್ಚಾಗಿ ಸ್ಪರ್ಧಿಸುವುದು ಕಂಡು ಬರುತ್ತಿದೆ. ಇದೇ ರೀತಿ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅತ್ತೆ -ಸೊಸೆ ಇಬ್ಬರೂ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜಿಲ್ಲೆಯಲ್ಲಿ ಗಮನ ಸೆಳೆದಿದ್ದಾರೆ.

ರಮಾಬಾಯಿ ಈರಣ್ಣ ಹಾಗೂ ಮಂಜುಳಾ ಸಾಯಿಬಣ್ಣ ಗುಡುಬಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅತ್ತೆ ರಮಾಬಾಯಿ ಈರಣ್ಣ ಅವರು ವಾರ್ಡ್​ ನಂ. 03 ರಲ್ಲಿ ಸ್ಪರ್ಧಿಸಿದರೆ. ಸೊಸೆ ಮಂಜುಳಾ ಸಾಯಿಬಣ್ಣ ಗುಡುಬಾ ಅವರು ವಾರ್ಡ್​ ನಂ.04 ರಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ವಾರ್ಡ್ ನಂಬರ್ 03 ರಿಂದ ರಮಾಬಾಯಿ ಈರಣ್ಣ ಅವರ ಮಗ ಸಾಯಿಬಣ್ಣ ಗುಡುಬಾ ಸ್ಪರ್ಧಿಸಿ ವಿಜಯ ಸಾಧಿಸಿದ್ದರು. ಈ ಬಾರಿ ಮಹಿಳಾ ಮೀಸಲಾತಿ ಬಂದಿರುವುದರಿಂದ ತಾಯಿಯನ್ನು ಕಣಕ್ಕಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.