ಕಲಬುರಗಿ: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಹಾಗಾಂವ್ ರೈಲ್ವೆ ಬ್ರಿಡ್ಜ್ ಹತ್ತಿರ ನಡೆದಿದೆ.
ರೋಜಾ ಬಡಾವಣೆಯ ನಯಾಮೊಹಲ್ಲಾ ನಿವಾಸಿ ಅಮಿನುದ್ದಿನ್ (21) ಕೊಲೆಯಾದ ಯುವಕ. ಕಲ್ಲಿನಿಂದ ಜಜ್ಜಿ ಅಮಿನುದ್ದಿನ್ ಕೊಲೆ ಮಾಡಿ ಬಿಸಾಡಲಾಗಿದೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗ್ತಿದೆ.
ಇಬ್ಬರು ಯುವಕರು ಕೆಲಸ ಇದೆ ಎಂದು ಅಮಿನುದ್ದಿನ್ನನ್ನು ಕರೆದೊಯ್ದು ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಅಮಿನುದ್ದಿನ್ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಮಿನುದ್ದಿನ್ ಇದೀಗ ಹೆಣವಾಗಿ ಪತ್ತೆಯಾಗಿದ್ದಾನೆ ಎಂದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ರೋಜಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಪತ್ತೆಗೆ ಬಲೆ ಬೀಸಿದ್ದಾರೆ.