ETV Bharat / state

ಧಾರವಾಡ ಪ್ರತ್ಯೇಕ ಮಹಾನಗರ‌‌ ಪಾಲಿಕೆಗೆ ಕಾಲ ಸನ್ನಿಹಿತ: ಸವಾಲುಗಳೇನು? ಪ್ರತ್ಯೇಕ ಪಾಲಿಕೆಯಾದ್ರೆ ಅನುಕೂಲವೇನು? - HUBLI DHARWAD CORPORATION

ಧಾರವಾಡ ಪ್ರತ್ಯೇಕ ಮಹಾನಗರ‌‌ ಪಾಲಿಕೆಗೆ ಕಾಲ ಸನ್ನಿಹಿತವಾಗಿದೆ. ಪ್ರತ್ಯೇಕ ಪಾಲಿಕೆಯಾದ್ರೆ ಆಗುವ ಅನುಕೂಲಗಳೇನು ಎಂಬುದರ ಕುರಿತು 'ಈಟಿವಿ ಭಾರತ' ಪ್ರತಿನಿಧಿ ಹೆಚ್.ಬಿ.ಗಡ್ಡದ ವಿಶೇಷ ವರದಿ.

HUBLI DHARWAD CORPORATION
ಮಹಾನಗರ‌‌ ಪಾಲಿಕೆ (ETV Bharat)
author img

By ETV Bharat Karnataka Team

Published : 6 hours ago

Updated : 5 hours ago

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಪ್ರತ್ಯೇಕಗೊಂಡು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸಿಗುವ ಕಾಲ ಸನ್ನಿಹಿತವಾಗಿದೆ. ಅಂದುಕೊಂಡಂತೆ ಆಗಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಕ್ಯಾಬಿನೆಟ್ ಸಭೆಯಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅಂತಿಮ ಮುದ್ರೆ ಬೀಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಿದ್ದರೂ ಕೂಡ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಮುದ್ರೆ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರತ್ಯೇಕ ಪಾಲಿಕೆಗೆ ದಶಕಗಳಿಂದ ಕೂಗು: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಬೆಳೆಯುತ್ತಿದಂತೆ ಧಾರವಾಡ ಪ್ರತ್ಯೇಕ ಪಾಲಿಕೆ ಬೇಕು ಎಂಬ ಕೂಗು ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದ್ರೆ ಅದು ಒಂದಾನೊಂದು ಕಾರಣದಿಂದ ಮುಂದೂಡಿಕೆಯಾಗುತ್ತಾ ಬಂದು ಈಗ ಪ್ರತ್ಯೇಕತೆಯ ಹೊಸ್ತಲಿಗೆ ಬಂದು ನಿಂತಿದೆ. ಇದೀಗ ರಾಜ್ಯ ಸರ್ಕಾರ ಅದಕ್ಕೆ ಬಹುತೇಕ ಒಪ್ಪಿಗೆ ನೀಡಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲೂ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸ್ಥಾನ ನೀಡಿಕೆಗೆ ಒಪ್ಪಿಗೆಯ ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರತ್ಯೇಕ ಪಾಲಿಕೆ ರಚನೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ, ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.

ಧಾರವಾಡ ಪ್ರತ್ಯೇಕ ಮಹಾನಗರ‌‌ ಪಾಲಿಕೆ ಬಗ್ಗೆ ಪಾಲಿಕೆ ಸದಸ್ಯರ ಅಭಿಪ್ರಾಯ (ETV Bharat)

ಮಹಾನಗರ ಪಾಲಿಕೆಗೆ ಮಾನದಂಡಗಳೇನು?: ಮಹಾನಗರ ಪಾಲಿಕೆ ರಚನೆಗೆ ಅದರದ್ದೇ ಆದ ಮಾನದಂಡಗಳಿವೆ.

  • ಹೊಸ ಮಹಾನಗರ ಪಾಲಿಕೆ ರಚನೆಗೆ ಕನಿಷ್ಠ 3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರಬೇಕಿದೆ.
  • ಧಾರವಾಡ ಮಹಾನಗರ ಪಾಲಿಕೆಯಾಗಿ ರಚನೆಗೊಂಡಲ್ಲಿ ಅದರ ವ್ಯಾಪ್ತಿಯಲ್ಲಿ ಅಂದಾಜು 6 ಲಕ್ಷ ಜನಸಂಖ್ಯೆ ಇರಲಿದೆ.
  • ಆದಾಯ ದೃಷ್ಟಿಯಿಂದಲೂ ಧಾರವಾಡ ನಿಗದಿಪಡಿಸಿದ ನಿಯಮಕ್ಕಿಂತ ಹೆಚ್ಚಿನದಾಗಿದೆ ಎಂದು ಪಾಲಿಕೆ ರಚನೆಗೆ ಅಗತ್ಯವಿರುವ ಪುರಾವೆ ನೀಡಲಾಗಿದೆ.

ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಸಕರು ಸಹ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆಗೆ ಬೆಂಬಲಿಸಿದ್ದಾರೆ.

ಪ್ರತ್ಯೇಕ ಪಾಲಿಕೆಯಾದ್ರೆ ಆಗುವ ಅನುಕೂಲಗಳು:

  • ಧಾರವಾಡ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ಆಡಳಿತ ದೃಷ್ಟಿಯಿಂದ ಸುಲಭವಾಗಲಿದೆ‌.
  • ಅವಳಿನಗರವಾದರೂ ಮಹಾನಗರ ಪಾಲಿಕೆಗೆ ಬರುವಷ್ಟೇ ಅನುದಾನ ಬರುತ್ತಿದ್ದು ಇದೀಗ ಪ್ರತ್ಯೇಕ ಪಾಲಿಕೆಯಾದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಪ್ರತ್ಯೇಕ ಅನುದಾನ ಬರಲಿದ್ದು, ಅಭಿವೃದ್ಧಿಗೆ ಅನುಕೂಲ.
  • ಪ್ರತ್ಯೇಕ ಪಾಲಿಕೆಯಿಂದ ಪ್ರತ್ಯೇಕ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಬರಲಿದ್ದು ಕೆಲಸ ಕಾರ್ಯಗಳ ಸ್ವಂತ ಕೈಗೊಳ್ಳಲು ಸಹಕಾರಿ ಆಗಲಿದೆ.

ಎರಡನೇ ದೊಡ್ಡ ಮಹಾನಗರ ‌ಪಾಲಿಕೆ ಪಟ್ಟ ಮಿಸ್: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬೆಂಗಳೂರು ಬಿಟ್ಟರೆ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ‌ ಇದೆ. ಇದರಿಂದ 2ನೇ ದೊಡ್ಡ ಮಹಾನಗರಕ್ಕೆ ಪಟ್ಟ ಕೈ ತಪ್ಪಲಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ಹಿಂದೆ 67 ವಾರ್ಡ್​ಗಳನ್ನು ಹೊಂದಿತ್ತಾದರೂ ವಾರ್ಡ್‌ಗಳ ಪುನರ್ ವಿಂಗಡಣೆಯಿಂದ 82 ವಾರ್ಡ್‌ಗಳು ಅಸ್ತಿತ್ವಕ್ಕೆ ಬಂದಿದ್ದವು. ಬೆಂಗಳೂರು ನಂತರದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಎಂಬ ಖ್ಯಾತಿ ಪಡೆದಿತ್ತು. ಬೆಂಗಳೂರು ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆ ಪಟ್ಟಕ್ಕೆ ಎಲ್ಲ ರೀತಿಯ ಅರ್ಹತೆಯನ್ನು ಪಡೆದುಕೊಳ್ಳುವತ್ತ ಸಾಗಿತ್ತು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಿ ರಚನೆಗೊಂಡರೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಟ್ಟ ತಪ್ಪಲಿದ್ದು, ಬೃಹತ್ ಮಹಾನಗರ ಪಾಲಿಕೆ ಅವಕಾಶದಿಂದಲೂ ದೂರವಾಗಲಿದೆ.

ಧಾರವಾಡ ಪ್ರತ್ಯೇಕ‌ ಮಹಾನಗರ ಪಾಲಿಕೆ ಕುರಿತಂತೆ ಮಹಾನಗರ ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ‌ನೀಡಿದ್ದು, ''ಸಹೋದರಂತೆ ಇದ್ದ ಹುಬ್ಬಳ್ಳಿ-ಧಾರವಾಡ ಬೇರೆ ಬೇರೆ ಆಗುತ್ತಿರುವುದು ಒಂದು ಕಡೆ ಬೇಜಾರಾಗುತ್ತಿದೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಆಗುತ್ತಿರುವುದು ಸ್ವಾಗತ. ಹುಬ್ಬಳ್ಳಿ ವಾಣಿಜ್ಯ ‌ಕೇಂದ್ರವಾದ್ರೆ, ಧಾರವಾಡ ಶೈಕ್ಷಣಿಕ ಕಾಶಿಯಾಗಿದೆ. ಹಲವು ವರ್ಷಗಳಿಂದ ಎರಡು ನಗರಗಳು ಕೂಡಿ ಅಭಿವೃದ್ಧಿಯಾಗಿವೆ. ಆದರೆ, ಬಹುದಿನಗಳ‌ ಬೇಡಿಕೆಯಂತೆ ಪಾಲಿಕೆ ಬೇರ್ಪಡಿಸುವ ನಿರ್ಣಯವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಬೇರ್ಪಟ್ಟರೆ ಅವಳಿ ನಗರಗಳ‌ ಅಭಿವೃದ್ಧಿಯಾಗಲಿದೆ. ಧಾರವಾಡ ಹಾಗೂ ಹುಬ್ಬಳ್ಳಿ ವಾರ್ಡ್​ಗಳು ಹೆಚ್ಚಾಗಲಿವೆ. ಅಕ್ಕ‌-ಪಕ್ಕದ ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ತರಲಾಗುತ್ತದೆ. ಹೀಗಾಗಿ ಎರಡು ನಗರ ಅಭಿವೃದ್ಧಿಗೆ ಇದು ಸಹಕಾರಿ'' ಎಂದರು.

"ಪ್ರತ್ಯೇಕ ‌ಮಹಾನಗರ ಪಾಲಿಕೆ ಆಗುವುದು ಸಂತೋಷದ ಜೊತೆಗೆ ದುಃಖವಾಗುತ್ತಿದೆ. ಅಭಿವೃದ್ಧಿ ಹಾಗೂ ಬೆಳವಣಿಗೆ ದೃಷ್ಟಿಯಿಂದ ಧಾರವಾಡಕ್ಕೆ ಅನ್ಯಾಯವಾಗುತ್ತಿತ್ತು. 100 ಕೋಟಿ ಅನುದಾನ ಬಂದ್ರೆ ಇಲ್ಲಿ 75 ಕೋಟಿ, ಧಾರವಾಡಕ್ಕೆ 25 ಕೋಟಿ ಹಂಚಿಕೆಯಾಗುತ್ತಿತ್ತು.‌ ಆದರೆ, ಪ್ರತ್ಯೇಕ ‌ಪಾಲಿಕೆಯಾದ್ರೆ ಎಲ್ಲಾ ಮಾನದಂಡಗಳು ಧಾರವಾಡಕ್ಕೆ ಇದೆ. ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ಆಗುತ್ತಿರುವುದು ಸಂತೋಷ" ಎಂದು ಧಾರವಾಡದ ವಾರ್ಡ್ ಸಂಖ್ಯೆ 2ರ ಮಹಾನಗರ ಪಾಲಿಕೆ ಸದಸ್ಯೆ ಸೂರವ್ವ ಬಾಳನಗೌಡ ಪಾಟೀಲ್ ಹಾಗೂ ವಾರ್ಡ್ ನಂಬರ್ 10ರ ಮಹಾನಗರ ‌ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಭಾಗಿ ತಮ್ಮ ಅಭಿಮತ ವ್ಯಕ್ತಪಡಿಸಿದರು.

ಮುಂದಿರುವ ಸವಾಲುಗಳೇನು?:

  • ಹುಬ್ಬಳ್ಳಿ-ಧಾರವಾಡದಲ್ಲಿ ಹೇಳಿಕೊಳ್ಳುವುದಕ್ಕೆ ದೊಡ್ಡ ಉದ್ಯಮಗಳು, ಕೈಗಾರಿಕಾ ಪ್ರದೇಶಗಳು ಇಲ್ಲ. ಇರುವ ತಾರಿಹಾಳ, ಗೋಕುಲ, ಗಾಮನಗಟ್ಟಿ, ಲಕಮನಹಳ್ಳಿ, ರಾಯಾಪುರ, ಬೇಲೂರು, ಮಮ್ಮಿಗಟ್ಟಿ ಇನ್ನಿತರ ಕೈಗಾರಿಕಾ ಪ್ರದೇಶ ಎರಡು ನಗರಗಳಿಗೆ ಹಂಚಿಕೆಯಾಗಲಿದೆ. ಅವಳಿನಗರವಿದ್ದಾಗ ಕೈಗಾರಿಕಾ ವಲಯ ಇಷ್ಟಿದೆ ಎಂದು ಹೇಳಿಕೊಳ್ಳುವುದಕ್ಕಾದರೂ ಇಷ್ಟೆಂದಿತ್ತು. ಹಂಚಿಕೆ ನಂತರ ಎರಡು ನಗರಗಳಿಗೆ ಕೈಗಾರಿಕಾ ವಲಯದ ವೃದ್ಧಿ ಅವಶ್ಯಕತೆ ಉಂಟಾಗಲಿದೆ.
  • ವಿಶೇಷವಾಗಿ ಹುಬ್ಬಳ್ಳಿ ಮಹಾನಗರ ಕೈಗಾರಿಕಾ ವಲಯದ ಕೊರತೆ ಎದುರಿಸಿದಂತಾಗಲಿದ್ದು, ಹೊಸ ಕೈಗಾರಿಕಾ ವಲಯ ಸ್ಥಾಪನೆಗೆ ಹುಬ್ಬಳ್ಳಿ ಈಗಿನಿಂದಲೇ ಯತ್ನಿಸಿದರೂ ಇನ್ನು ಐದಾರು ವರ್ಷಗಳಲ್ಲಿ ಒಂದು ಹಂತದಲ್ಲಿ ಒಂದೆರಡು ಕೈಗಾರಿಕಾ ವಲಯಗಳನ್ನು ಚಿಂತಿಸಬಹುದಾಗಿದೆ. ಆದರೆ, ಇರುವ ಸಮಸ್ಯೆ ಎಂದರೆ ಭೂಮಿ ಸ್ವಾಧೀನದ್ದಾಗಿದೆ. ಇದ್ದ ಭೂಮಿ ಖಾಸಗಿ ರಿಯಲ್ ಎಸ್ಟೇಟ್ ಸೊತ್ತಾಗಿದೆ ಎಂಬುದು ವಾಸ್ತವದ ಸ್ಥಿತಿ. ಈಗಾಗಲೇ ಅಸ್ತಿತ್ವದಲ್ಲಿರುವ ಹುಬ್ಬಳ್ಳಿ, ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಧಾರವಾಡ ಮಹಾನಗರ ಪಾಲಿಕೆ ಎರಡು ಹಲವು ಸವಾಲು ಎದುರಿಸಿ ಬೆಳೆಯಬೇಕಿದೆ.

ಇದನ್ನೂ ಓದಿ:

ಹು-ಧಾ ಸ್ವಚ್ಛತೆಗೆ ಮುಂದಾದ ಪಾಲಿಕೆ; ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್​ಗಳಿಂದ ಕಸ ತೆಗೆವ ಕಾರ್ಯ - VACUUM GARBAGE SUCTION MACHINE

ಹುಬ್ಬಳ್ಳಿ ಧಾರವಾಡದ ಕಸದ ಬೆಟ್ಟಗಳಿಗೆ ಕೊನೆಗೂ ಮುಕ್ತಿ: ಬಯೋ ಮೈನಿಂಗ್ ಮೂಲಕ ತ್ಯಾಜ್ಯ ಕರಗಿಸುವ ಕೆಲಸ ಶುರು - WASTE MANAGEMENT

ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಶೀಘ್ರದಲ್ಲಿಯೇ ಹೊಸ ರೂಪದೊಂದಿಗೆ ಪುನಾರಂಭ: ಮರುಕಳಿಸಲಿದೆ ಗತವೈಭವ: ಏನಿದರ ವೈಶಿಷ್ಟ್ಯ - HUBLI OLD BUS STAND FEATURES

Last Updated : 5 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.