ETV Bharat / state

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ: ಸಚಿವ ರಾಮುಲು ಕಿಡಿಕಿಡಿ

author img

By

Published : Feb 11, 2022, 4:10 PM IST

ಹಿಜಾಬ್ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

minister-srimalu-reaction-on-siddaramaiah-statement
ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ಕಲಬುರಗಿ: ಹಿಜಾಬ್ ಇಟ್ಟುಕೊಂಡು ಸಿದ್ದರಾಮಯ್ಯ ಅವರು ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿಜಾಬ್ ಬಗ್ಗೆ ದ್ವೇಷ ಭಾವನೆ ಬಿತ್ತಿರುವುದೇ ಬಿಜೆಪಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಕ್ರಿಕೆಟ್​ನಲ್ಲಿ ಆಟಗಾರರು ಸ್ಕೋರ್ ಮಾಡುವ ರೀತಿ ಸಿದ್ದರಾಮಯ್ಯ ಪೊಲಿಟಿಕಲ್ ಸ್ಕೋರ್ ಮಾಡುವ ಯತ್ನ ಅವರದ್ದಾಗಿದೆ ಎಂದು ಗುಡುಗಿದರು.‌ ಸಿದ್ದರಾಮಯ್ಯ ಅವರು ಇಳಿದಿರುವ ಮಟ್ಟಕ್ಕೆ ನಾನು ಇಳಿಯುವ ಪ್ರಯತ್ನ ಮಾಡಲ್ಲ. ಹಿಜಾಬ್ ವಿಚಾರ ಕೋರ್ಟ್​ನಲ್ಲಿದೆ, ಹಾಗಾಗಿ ಈ ಹಂತದಲ್ಲಿ ನಾನು ಹೆಚ್ಚೇನು ಮಾತನಾಡಲಾರೆ ಎಂದರು.

ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ಸಚಿವ ಬಿ. ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯ ಕೆಕೆಆರ್​​ಡಿಬಿ ಸಭಾಂಗಣದಲ್ಲಿ ಸಭೆ ನಡೆಯಿತು. 371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನದಡಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಸಭೆ ಇದಾಗಿದೆ.

ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಮನೆಗೆ 'ಮಹಾ' ಕೈ ಶಾಸಕ ಭೇಟಿ: ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.