ETV Bharat / state

ಗಾಣಗಾಪುರದ ದತ್ತಾತ್ರೇಯನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೋಳಿ - Ramesh Zarakiholi visits Ganagapur Dattatreya Temple

ಕಲಬುರಗಿ ಪ್ರವಾಸದಲ್ಲಿರುವ ಸಚಿವ ರಮೇಶ್ ಜಾರಕಿಹೋಳಿ, ಜಿಲ್ಲಾಡಳಿತ ನಿಷೇಧದ ನಡುವೆಯೂ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದರು.

Minister Ramesh Zarakiholi visits
ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಸಚಿವ ರಮೇಶ್ ಜಾರಕಿಹೋಳಿ ಭೇಟಿ
author img

By

Published : Jul 2, 2020, 11:24 AM IST

ಕಲಬುರಗಿ: ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಗಾಣಗಾಪುರ ದತ್ತನ ದರ್ಶನ ಪಡೆದಿದ್ದಾರೆ.

ಗಾಣಗಾಪುರದ ದತ್ತಾತ್ರೇಯನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೋಳಿ
ಬೆಳಗ್ಗಿನ ಜಾವ ದೇವಸ್ಥಾನಕ್ಕೆ ತೆರಳಿದ ಸಚಿವ ರಮೇಶ್ ಜಾರಕಿಹೋಳಿ ವಿಶೇಷ ಪೂಜೆ‌‌‌‌‌ ಸಲ್ಲಿಸಿದ್ದಾರೆ. ಈ ವೇಳೆ ಸಚಿವರಿಗೆ ಸಂಸದ ಉಮೇಶ್ ಜಾಧವ್, ಸ್ಥಳೀಯ ಬಿಜೆಪಿ ಶಾಸಕರು ಹಾಗು ಮತ್ತಿತರ ಮುಖಂಡರು ಸಾಥ್‌ ನೀಡಿದರು.

ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುವುದರಿಂದ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜು. 7ರ ವರೆಗೆ ದೇವಸ್ಥಾನ ಬಂದ್ ಮಾಡುವಂತೆ ಡಿಸಿ ಬಿ.ಶರತ್ ಆದೇಶಿಸಿದ್ದಾರೆ. ಆದರೂ ಸಹ ಜಿಲ್ಲಾಡಳಿತ ಆದೇಶವನ್ನು ಮೀರಿ ಸಚಿವರು ದತ್ತಾತ್ರೇಯನ ದರ್ಶನ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.