ಕಲಬುರಗಿ : ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್‌ಗೆ ಬರಲು ಸಿದ್ಧರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಮುರುಗೇಶ ನಿರಾಣಿ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ನಿರಾಣಿ, ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಬಿಜೆಪಿ. ಇಡೀ ವಿಶ್ವದ ಜನತೆ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಸಹ ದೊರೆತ್ತಿಲ್ಲ.
ಹೀಗಿರುವಾಗ, ಮುಳುಗುತ್ತಿರುವ ಹಡುಗಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರು ಸೇರುತ್ತಾರೆ. ಕಾಂಗ್ರೆಸ್ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ವಲಸೆ ಬಂದವರು ಜಾತ್ರೆ ಮಾಡಿ ಹೋಗ್ತಾರೆ : ಬಿಜೆಪಿಗೆ ವಲಸೆ ಬಂದವರು ಜಾತ್ರೆ ಮಾಡಿಕೊಂಡು ಹೋಗ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಮುರುಗೇಶ ನಿರಾಣಿ, ಎರಡುವರೆ ಲಕ್ಷ ಮತ ಪಡೆದು ಆಯ್ಕೆಯಾದವರು ಈ ರೀತಿ ಮಾತನಾಡಬಾರದು ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವಲಸೆ ಬಂದವರು ಸಹ ನಮ್ಮ ಅಣ್ಣ-ತಮ್ಮಂದಿರು. ಅವರು ಎಲ್ಲಿ ಸಹ ಪಕ್ಷ ಬಿಡುವ ಮಾತನಾಡಿಲ್ಲ. ಹೀಗಾಗಿ, ಅವರ ಬಗ್ಗೆ ಇಲ್ಲ ಸಲ್ಲದನ್ನು ಮಾತನಾಡಬಾರದು. ಈ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯಾಧ್ಯಕ್ಷ ಕಟೀಲ್ ಸೂಚಿಸಿದ್ದಾರೆ. ಒಂದು ವೇಳೆ ಹೀಗೆ ಮಾತು ಮುಂದುವರೆಸಿದರೆ ಕ್ರಮ ಜರುಗಿಸುತ್ತಾರೆ ಎಂದು ಯತ್ನಾಳ್ಗೆ ಟಾಂಗ್ ನೀಡಿದರು.
ಓದಿ: ರಾಮೋಜಿ ಫಿಲಂ ಸಿಟಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ.. ಧ್ವಜಾರೋಹಣ ಮಾಡಿದ ರಾಮೋಜಿ ರಾವ್..