ETV Bharat / state

ಕಲಬುರಗಿಯಲ್ಲಿ ಮಳೆಯ ಅಬ್ಬರ: ರೈತರ ಬದುಕು ಬರ್ಬರ - ಕಂಪ್ಲಿಯಲ್ಲಿ ಮಳೆ

ಕಲಬುರಗಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿನ ರೈತರ ಬೆಳೆಗಳು ಮಳೆ ನೀರಿನಿಂದ ಕೊಚ್ಚಿ ಹೋಗಿವೆ. ತೊಗರಿ, ಉದ್ದು, ಹೆಸರು, ಸಜ್ಜೆ ಬೆಳೆಗಳು ನಾಶವಾಗಿವೆ.

ಕಲಬುರಗಿಯಲ್ಲಿ ಮಳೆಯ ಅಬ್ಬರ
ಕಲಬುರಗಿಯಲ್ಲಿ ಮಳೆಯ ಅಬ್ಬರ
author img

By

Published : Sep 15, 2020, 2:34 PM IST

Updated : Sep 15, 2020, 2:40 PM IST

ಕಲಬುರಗಿ: ತಡರಾತ್ರಿಯಿಂದ ಸುರಿದ ಮಳೆ ಜಿಲ್ಲೆಯ ಜನರನ್ನು ಹೈರಾಣಾಗಿಸಿದೆ. ನಿರಂತರವಾಗಿ ಮಳೆರಾಯ ಆರ್ಭಟಿಸಿದ್ದು, ನಗರದ ಪೂಜಾ ಕಾಲೋನಿ ಸೇರಿ ಹಲವು ಬಡಾವಣೆಗಳಲ್ಲಿ ಮಳೆ ನೀರು ಆವರಿಸಿಕೊಂಡಿದೆ.

ಬಡಾವಣೆ ರಸ್ತೆಗಳಲ್ಲಿ ಸುಮಾರು ಅರ್ಧ ಅಡಿಯಷ್ಟು ನೀರು ಹರಿಯುತ್ತಿದ್ದು, ನಿವಾಸಿಗಳು ಸಂಚರಿಸಲು ಪರದಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಕಮಲಾಪುರ ತಾಲೂಕಿನ ಸೀರಗಾಪುರ, ಕಲಬುರಗಿ ತಾಲೂಕಿನ ಕುಂಸಿ ಗ್ರಾಮ ಮಳೆ ನೀರಿನಿಂದ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ದವಸ ಧಾನ್ಯಗಳು ಹಾಳಾಗಿವೆ. ಮನೆಯಿಂದ ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ.

ವರುಣನ ಆರ್ಭಟಕ್ಕೆ ಜಿಲ್ಲೆಯಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿನ ರೈತರ ಬೆಳೆಗಳು ಮಳೆ ನೀರಿನಿಂದ ಕೊಚ್ಚಿ ಹೋಗಿವೆ. ತೊಗರಿ, ಉದ್ದು, ಹೆಸರು, ಸಜ್ಜೆ ಬೆಳೆಗಳು ನಾಶವಾಗಿವೆ.

ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಇದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Last Updated : Sep 15, 2020, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.