ಕಲಬುರಗಿ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ನಾಳೆ ಸಂಜೆ ನಗರದ ರಿಂಗ್ ರಸ್ತೆಯಲ್ಲಿರುವ ಪೀರ್ ಬಂಗಾಲಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಎಂಐಎಂ ಜಿಲ್ಲಾ ಮುಖಂಡ ಮೊಹಮ್ಮದ್ ಮೈನುದ್ದಿನ್ ತಿಳಿಸಿದ್ದಾರೆ.
ಸಮಾವೇಶದಲ್ಲಿ ಔರಂಗಬಾದ್ ಸಂಸದ ಹಾಗೂ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಪಾಲ್ಗೊಳ್ಳಲಿದ್ದು, ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ವರೆಗೆ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸುಮಾರು 15 ಸಾವಿರ ಜನರು ಪಾಲ್ಗೊಳ್ಳಲಿದ್ದು, ಅಸಾದುದ್ದಿನ್ ಓವೈಸಿ ಸರ್ವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ಎಐಎಂಐಎಂ ಜಿಲ್ಲಾಧ್ಯಕ್ಷ ಅಬ್ದುಲ್ ರಹಿಂ ಮಿರ್ಚಿ ಸೆಟ್ ಹಾಗೂ ಮುಖಂಡ ಮಹಮ್ಮದ್ ಮೈನುದ್ದಿನ್ ತಿಳಿಸಿದ್ದಾರೆ.