ಕಲಬುರಗಿ: ಆಗಸ್ಟ್ 4 ರಂದು ಕಲಬುರಗಿಗೆ ಭೇಟಿ ನೀಡಿದ್ದ ಡಿಕೆಶಿ ಅವರನ್ನು ಇಲ್ಲಿನ ಜಯಪ್ಪ ಎಂಬವರು ಶಾಲು ಹೊದಿಸಿ ಸನ್ಮಾನಿಸಿದ್ದರು. ಈ ವ್ಯಕ್ತಿಯಲ್ಲಿ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಗಾಣಗಾಪೂರ ದರ್ಶನಕ್ಕೆ ತೆರಳಿದ್ದ ವೇಳೆ ಡಿಕೆಶಿ ಸಾಮಾಜಿಕ ಅಂತರ ಮರೆತು ಅಭಿಮಾನಿಗಳು ಹಾಗು ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ್ದರು.
ಹೀಗಾಗಿ ಸಹಜವಾಗಿಯೇ ಡಿಕೆಶಿ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.