ಕಲಬುರಗಿ: ಜಾನುವಾರು ಖದಿಯಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಫರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಸ್ಟ್ ಮುಂಬೈ ಮೂಲದ ಫರೀದ್ ಶೇಕ್ ಖುರೇಶಿ (40) ಮೃತ ವ್ಯಕ್ತಿ. ಈತ ಮಧ್ಯರಾತ್ರಿ ಸಿರನೂರ ಗ್ರಾಮದ ಮನೆಯೊಂದರಲ್ಲಿ ಜಾನುವಾರು ಖದೀಯುವಾಗ ಗ್ರಾಮಸ್ಥರು ಬೆನ್ನಟ್ಟಿದ್ದರು.
ಕುಡಿದ ನಶೆಯಲ್ಲಿದ್ದ ಫರೀದ್ ಹೊಲವೊಂದರಲ್ಲಿ ಓಡಿ ಹೋಗಿ ಗ್ರಾಮಸ್ಥರಿಂದ ತಪ್ಪಿಸಿಕೊಂಡಿದ್ದ. ಆದರೂ ಬೆನ್ನು ಬಿಡದ ಗ್ರಾಮಸ್ಥರು ಆತನನ್ನು ಪತ್ತೆ ಮಾಡಿ ಪೊಲೀಸ್‌ರಿಗೊಪ್ಪಿಸಿದ್ದರು.
ಗ್ರಾಮಸ್ಥರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಫರೀದ್ ಬಿದ್ದು ಗಾಯಗೊಂಡಿದ್ದ. ಬಳಿಕ ಆತನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಮೂರು ಗಂಟೆಗಳ ನಂತರ ಹೃದಯಾಘಾತದಿಂದ ಫರೀದ್ ಮೃತಪಟ್ಟಿದ್ದಾನೆಂದು ಪೊಲೀಸ್ ಕಮಿಷನರ್ ಎನ್.ಸತೀಶ್ ಕುಮಾರ್ ತಿಳಿಸಿದ್ದಾರೆ.
ಓದಿ: ಹೆಚ್ಚು ಮತ ಪಡೆದರೂ ನಲಪಾಡ್ಗಿಲ್ಲ ಅಧ್ಯಕ್ಷ ಪಟ್ಟ... ಯುವ ಕಾಂಗ್ರೆಸ್ಗೆ ರಕ್ಷಾ ರಾಮಯ್ಯ ಸಾರಥಿ
ಈ ಕುರಿತು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.