ETV Bharat / state

ಕಲ್ಯಾಣ ಕರ್ನಾಟಕದಲ್ಲಿ‌ ಕಾಂಗ್ರೆಸ್ ರಣಕಹಳೆ: ನಾಳೆ ತವರಿಗೆ ಆಗಮಿಸಲಿದ್ದಾರೆ ಖರ್ಗೆ

ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತವರು ಜಿಲ್ಲೆ ಕಲಬುರಗಿಗೆ ಆಗಮಿಸಲಿದ್ದಾರೆ.

Kn_klb_02
ಕಲಬುರಗಿಗೆ ಆಗಮಿಸಲಿರುವ ಖರ್ಗೆ
author img

By

Published : Dec 9, 2022, 8:10 PM IST

ಕಲಬುರಗಿ: ಹಿಮಾಚಲ ಪ್ರದೇಶದಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಪಕ್ಷ ಇದೀಗ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕದಿಂದ ರಣಕಹಳೆ ಊದಲು ಸಿದ್ಧವಾಗಿದೆ. ಎಐಸಿಸಿ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ತವರಿಗೆ ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಾಗತ ಕೋರುವ ಮತ್ತು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನರನ್ನು ಸೇರಿಸಿ 'ಕಲ್ಯಾಣ ಕ್ರಾಂತಿ ಸಮಾವೇಶ' ನಡೆಸುವ ಮೂಲಕ ಕರ್ನಾಟಕದಲ್ಲಿ ಕೈ ಪಕ್ಷ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ.

ಖರ್ಗೆ ಅವರನ್ನು ಸ್ವಾಗತಿಸಲು ಕೆಪಿಸಿಸಿ ಹಾಗೂ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಭರ್ಜರಿ ತಯಾರಿ ನಡೆಸಿದೆ. ನಗರದ ಎನ್.ವಿ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು ರಾಜ್ಯ ನಾಯಕರ ದಂಡೇ ಪಾಲ್ಗೊಳ್ಳಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ನಾಯಕರು ಕಲಬುರಗಿಯಲ್ಲಿ ಬೀಡುಬಿಟ್ಟು ಸಮಾವೇಶದ ಸಿದ್ದತೆಯಲ್ಲಿ ನಿರತರಾಗಿದ್ದಾರೆ. ನಗರದೆಲ್ಲೆಡೆ ತಮ್ಮ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿ ಬಾವುಟ, ಫ್ಲೆಕ್ಸ್‌, ಕಟೌಟ್‌ಗಳು ರಾರಾಜಿಸುತ್ತಿವೆ.

ಕಲಬುರಗಿಯಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶಕ್ಕೆ ತಯಾರಿ

ನಾಳೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಹೊರಡಲಿರುವ ಖರ್ಗೆ ಬೆಳಗ್ಗೆ 10.30 ಕ್ಕೆ ಕಲಬುರಗಿ ಏರ್​ಪೋರ್ಟ್​ ತಲುಪುವರು. ಏರ್​ಪೋರ್ಟ್‌ನಿಂದ ರಿಂಗ್ ರಸ್ತೆ ಮಾರ್ಗವಾಗಿ 11 ಗಂಟೆಗೆ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆಗೆ ಆಗಮಿಸಲಿದ್ದು, ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್.ವಿ ಗ್ರೌಂಡ್‌ಗೆ ಮೆರವಣಿಗೆ ತಲುಪಿದ ನಂತರ ಮಧ್ಯಾಹ್ನ 1 ಗಂಟೆಗೆ 'ಕಲ್ಯಾಣ ಕ್ರಾಂತಿ ಸಮಾವೇಶ' ಪ್ರಾರಂಭಗೊಳ್ಳಲಿದೆ.

ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಂದ ಅಂದಾಜು 3 ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಕೈ ನಾಯಕರು ಹೊಂದಿದ್ದಾರೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಭದ್ರವಾಗಿ ನೆಲೆ ಊರಲು ಕೈ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಗಂಗಾವತಿಯಿಂದ ನಾನು ಕಣಕ್ಕಿಳಿಯುವುದು ನಿಶ್ಚಿತ: ಶಾಸಕ ಪರಣ್ಣ ಮುನವಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.