ಕಲಬುರಗಿ : ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಜಾರಿಯಲ್ಲಿದ್ದ ಲಾಕ್ ಡೌನ್ ತೆರವು ಹಿನ್ನೆಲೆ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.
ನಗರದಲ್ಲಿ ಸಾರಿಗೆ ಬಸ್ ಸಂಚಾರ ಪುನರಾರಂಭಗೊಂಡಿದ್ದು, ಬೈಕ್, ಕಾರು, ಆಟೋ ಮತ್ತಿತರ ವಾಹನ ಸಂಚಾರವೂ ಎಂದಿನಂತಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರಿಗಳು ವಹಿವಾಟು ಆರಂಭಿಸಿದ್ದಾರೆ. ಇದುವರೆಗೆ ಪಾರ್ಸೆಲ್ಗೆ ಮಾತ್ರ ಸೀಮಿತವಾಗಿದ್ದ ಹೋಟೆಲ್ಗಳು ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ತೆರೆದಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕಲಬುರಗಿ ನಗರ ಮತ್ತು ಜಿಲ್ಲೆಯ ಇತರ ಪಟ್ಟಣಗಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಜುಲೈ 27 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿತ್ತು. ನಿನ್ನೆ ಸಿಎಂ ಲಾಕ್ ಡೌನ್ ಹಿಂಪಡೆದಿರುವುದಾಗಿ ಘೋಷಿಸಿದ ಬಳಿಕ ಜಿಲ್ಲೆಯಲ್ಲೂ ತೆರವುಗೊಳಿಸಲಾಗಿದೆ.