ಕಲಬುರಗಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಗಲು ರಾತ್ರಿ ಸರ್ಕಸ್ ಮಾಡಿದರು. ಅವರ ಪಕ್ಷ ಮತ್ತೇ ಅಧಿಕಾರಕ್ಕೆ ಬರಲ್ಲ, ಅವರು ಕಾಲಿಟ್ಟಕಡೆಯಲ್ಲೆಲ್ಲ ಕಾಂಗ್ರೆಸ್ ದೂಳಿಪಟ ಆಗುತ್ತಿದೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಆ ಗಾಂಧಿನೇ ಬೇರೆ ಈ ಗಾಂಧಿ ಕುಟುಂಬವೇ ಬೇರೆ, ಅವರಿಗೆ ಇವರಿಗೆ ಯಾವುದೇ ಹೋಲಿಕೆ ಇಲ್ಲ. ಖರ್ಗೆ ಅವರನ್ನ ಎಐಸಿಸಿ ಅಧ್ಯಕ್ಷ ಮಾಡಿದ್ರೆ ಅಧಿಕಾರಕ್ಕೆ ಬರುತ್ತೆ ಅನ್ನೊದು ಅವರ ಕನಸ್ಸು ಈಡೇರಲ್ಲ, ಖರ್ಗೆ ಅವರನ್ನು ಬಲಿ ಕೊಡಲು ಅಖಾಡಕ್ಕೆ ಇಳಿಸಿದ್ದಾರಷ್ಟೆ. ಈ ಹಿಂದೆ ದಲಿತ ಮುಖಂಡ ಪರಮೇಶ್ವರನ್ನ ಸೋಲಿಸಿದ್ದು ಇದೇ ಸಿದ್ದರಾಮಯ್ಯ, ಪರಮೇಶ್ವರ ಸಿಎಂ ರೆಸ್‌ನಲ್ಲಿದ್ದ ಕಾರಣ ಅವರನ್ನ ಸಿದ್ದರಾಮಯ್ಯ ಸೋಲಿಸಿದ್ರು. ನಾನು ಪರಮೇಶ್ವರ್ ಅವರನ್ನ ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಚಾಮುಂಡಿ ಮೇಲೆ ಆಣೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಭಾರತ್ ಜೋಡೋ ಯಾತ್ರೆಗೆ ಪ್ರತಿಕ್ರಿಯಿಸಿ, ಭಾರತ್ ಜೋಡೋ ಮಾಡುತ್ತಿದ್ದಾರೆ ಎಂದರೆ ಭಾರತ್ ತೋಡೋ ಮಾಡಿದವರು ಯಾರು? ಅಧಿಕಾರದ ಹಿಂದೂಸ್ತಾನ, ಪಾಕಿಸ್ತಾನವನ್ನ ವಿಭಜನೆ ಮಾಡಿದವರು ಯಾರು? ಇದೇ ಕಾಂಗ್ರೆಸ್ನವರು ಅಧಿಕಾರದ ಆಸೆಗಾಗಿ ದೇಶವನ್ನ ವಿಭಜನೆ ಮಾಡಿ ಈಗ ಭಾರತ್ ಜೋಡೋ ಮಾಡುವುದು ಹಾಸ್ಯಾಸ್ಪದ ಎಂದರು.
ಪಿಎಫ್ಐ ಬ್ಯಾನ್ ಬಗ್ಗೆ ಪ್ರತಿಕ್ರಿಯೆ: ಪಿಎಫ್ಐ ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದಕ್ಕೆ ಬ್ಯಾನ್ ಆಗಿದೆ. ಮುಂದೆ ಎಸ್ಡಿಪಿಐ ಕೂಡಾ ಬ್ಯಾನ್ ಆಗುವ ಸಾಧ್ಯತೆ ಇದೆ. ಚುನಾವಣೆ ಆಯೋಗದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವದು. ಆರ್‌ಎಸ್‌ಎಸ್ ಕೂಡಾ ಬ್ಯಾನ ಮಾಡಬೇಕೆಂಬ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಆರ್‌ಎಸ್‌ಎಸ್ ರಾಷ್ಟ್ರಭಕ್ತ ಸಂಘಟನೆಯಾಗಿದ್ದು, ಕೋಟ್ಯಂತರ ಯುವಕರಿಗೆ ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿಕೊಡುತ್ತಿದೆ.
ಯಾವುದೇ ಸಂದರ್ಭದಲ್ಲಿ ದೇಶಕ್ಕೆ ದ್ರೋಹ ಮಾಡದಂತೆ ಮತ್ತು ರಾಷ್ಟ್ರಕ್ಕೆ ಏನೇ ಸಂಕಷ್ಟಗಳು ಎದುರಾದಾಗ ಮುನ್ನುಗ್ಗಬೇಕು ಎಂದು ಹೇಳಿಕೊಡುತ್ತಿರುವ ಆರ್ಎಸ್ಎಸ್ಗೆ ತಾಯಿ ಸ್ಥಾನ ಕೊಟ್ಟಿದ್ದೇವೆ. ಆದರೇ ಪಿಎಫ್ಐನ ತಾಯಿಯೇ ಕಾಂಗ್ರೆಸ್, ಮುಸಲ್ಮಾನರ ಮತಕ್ಕಾಗಿ ಪಿಎಫ್ಐ ಬೆಳೆಸಿದ್ದು ಕಾಂಗ್ರೆಸ್ ಎಂದು ಗುಡುಗಿದರು. ಆರ್‌ಎಸ್‌ಎಸ್ ಅಪಾರ ಸಂಖ್ಯೆಯಲ್ಲಿ ರಾಷ್ಟ್ರಪ್ರೇಮಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದೆ. ಪಿಎಫ್ಐ ಬಾಂಬ್ ಸಿಡಿಸುವ ಬಗ್ಗೆ ತರಬೇತಿ ನೀಡಿದೆ ಆದರೆ, ಆರ್‌ಎಸ್‌ಎಸ್ ಇಂತಹ ಕೆಲಸ ಎಲ್ಲಾದರೂ ಮಾಡಿದೆಯಾ ಎಂದು ಪ್ರಶ್ನಿಸಿದರು.
ಇನ್ನು ತಮಗೆ ಮತ್ತೆ ಸಚಿವ ಸ್ಥಾನ ನೀಡೋ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಕೊಡೋದು ಬಿಡೋದು ವರಿಷ್ಠರ ವಿವೆಚನೆಗೆ ಬಿಟ್ಟ ವಿಷಯ, ನಾನು ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ ಎಂದರು. ನನಗೆ ಕ್ಲಿನ್ಚಿಟ್ ಸಿಕ್ಕಮೇಲೆ ಬೊಮ್ಮಾಯಿ, ಬಿಎಸ್ವೈ, ಕಟೀಲು ಕರೆ ಮಾಡಿ ಅಭಿನಂದಿಸಿದ್ದಾರೆ ಎಂದರು. ಸಿಎಂ ಬೊಮ್ಮಾಯಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋಕೆ ಸಿದ್ದರಾಮಯ್ಯ ತರ ಕೆಟ್ಟಾಗಿಲ್ಲಾ. ಬೊಮ್ಮಾಯಿ ಎರಡು ಕಡೆ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಜನ ಮನ್ನಣೆ: ಯಶಸ್ಸು ಬೇರೆಡೆ ಸೆಳೆಯಲು ಬಿಜೆಪಿಯ ಸುಳ್ಳು ಪಾಂಡಿತ್ಯ.. ಸಿದ್ದರಾಮಯ್ಯ ಆರೋಪ