ETV Bharat / state

ಕೆಕೆಆರ್​ಡಿಬಿ ಕೋಮಾದಲ್ಲಿತ್ತು, ಬಿಜೆಪಿ ಸರ್ಕಾರದಿಂದ ಚೇತರಿಸಿಕೊಳ್ಳುತ್ತಿದೆ: ದತ್ತಾತ್ರೇಯ ಪಾಟೀಲ ರೇವೂರ - ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ

ಹಿಂದಿನ ಸರ್ಕಾರದಲ್ಲಿ ಕೆಕೆಆರ್​ಡಿಬಿ ಕೋಮಾ ಸ್ಥಿತಿಗೆ ಹೋಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ವೆಂಟಿಲೇಟರ್​ನಲ್ಲಿರುವ ಕೆಕೆಆರ್​ಡಿಬಿಯನ್ನು ಗುಣಮುಖವನ್ನಾಗಿಸೋ ಕೆಲಸ ಶುರು ಮಾಡಿಕೊಂಡಿದ್ದು, ಸದ್ಯ ಕೋಮಾದಿಂದ ಚೇತರಿಸಿಕೊಳ್ತುತ್ತಿದೆ ಎಂದು ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿರುಗೇಟು ನೀಡಿದ್ದಾರೆ.

kkr-db-president-dattatreya-patil-revura
ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ
author img

By

Published : Dec 23, 2020, 5:38 PM IST

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕೋಮಾ ಸ್ಥಿತಿಯಲ್ಲಿದ್ದುದು ಸತ್ಯ. ಅದು ಹಿಂದಿನ ಸರ್ಕಾರದಿಂದ ಬಂದ ಬಳುವಳಿ. ಅದನ್ನು ಗುಣಮುಖವನ್ನಾಗಿಸೋ ಕೆಲಸ ಬಿಜೆಪಿ ಸರ್ಕಾರದಿಂದ ನಡೀತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿರುಗೇಟು ನೀಡಿದ್ದಾರೆ.

ಕೆಕೆಆರ್​ಡಿಬಿ ಕೋಮಾದಲ್ಲಿತ್ತು, ಬಿಜೆಪಿ ಸರ್ಕಾರದಿಂದ ಚೇತರಿಸಿಕೊಳ್ಳುತ್ತಿದೆ: ದತ್ತಾತ್ರೇಯ ಪಾಟೀಲ ರೇವೂರ

ರಾಜ್ಯ ಸರ್ಕಾರ ಐಸಿಯುನಲ್ಲಿದೆ. ಕೆಕೆಆರ್​ಡಿಬಿ ಕೋಮಾ ಸ್ಥಿತಿಗೆ ಜಾರಿದೆ ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಕೆಆರ್​ಡಿಬಿ ಕೋಮಾ ಸ್ಥಿತಿಯಲ್ಲಿ ಇರುವುದು ನಿಜ. ಹಿಂದಿನ ಸರ್ಕಾರದಲ್ಲಿ ಕೋಮಾ ಸ್ಥಿತಿಗೆ ಹೋಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ವೆಂಟಿಲೇಟರ್​ನಲ್ಲಿರುವ ಕೆಕೆಆರ್​ಡಿಬಿಯನ್ನು ಗುಣಮುಖವನ್ನಾಗಿಸೋ ಕೆಲಸ ಶುರು ಮಾಡಿಕೊಂಡಿದ್ದು, ಸದ್ಯ ಕೋಮಾದಿಂದ ಚೇತರಿಸಿಕೊಳ್ತುತ್ತಿದೆ ಎಂದರು.

1,131 ಕೋಟಿ ರೂ. ಅನುಮೋದನೆ: ರಾಜ್ಯ ಸರ್ಕಾರ 1,131 ಕೋಟಿ ರೂ. ಅನುಮೋದನೆ ನೀಡಿದೆ. 955 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಇದರಲ್ಲಿ 540 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನೂ ರಾಜ್ಯ ಸರ್ಕಾರ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ. ಯಾವ ಸರ್ಕಾರವೂ ಪೂರ್ಣ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಸರ್ಕಾರ ಇಷ್ಟು ಬಜೆಟ್ ನೀಡಿದೆ. ಇಷ್ಟಾದರೂ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸೋ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ಓದಿ: ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರಾತ್ರಿ 10 ಗಂಟೆಯ ಬಳಿಕ ಬಸ್​ ಬಂದ್

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರ ಡಬಲ್ ಇಂಜಿನ್ ಜೋಡಿಸಿದೆ. ಈ ಭಾಗದ ಅಭಿವೃದ್ಧಿಗೆ ವೇಗ ಸಿಗಲಿ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘವನ್ನು ಸರ್ಕಾರ ಅಸ್ತಿತ್ವಕ್ಕೆ ತಂದಿದೆ. ಇದರಿಂದಾಗಿ ಒಂದೇ ರೈಲಿಗೆ ಡಬಲ್​​ ಇಂಜಿನ್ ಜೋಡಿಸಿದಂತಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೂ ವೇಗ ಸಿಗಲಿದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ ಪ್ರತ್ಯೇಕವಾಗಿ 500 ಕೋಟಿ ರೂಪಾಯಿ ನಿಗದಿಗೊಳಿಸಿರೋ ರಾಜ್ಯ ಸರ್ಕಾರ, 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಕಲಂ 371 ಜೆ ಅಡಿ ನಿಗದಿಗೊಳಿಸಿದ ಅನುದಾನ ಯಾವುದೇ ಕಾರಣಕ್ಕೂ ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ರೇವೂರ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.