ಕಲಬುರಗಿ: ಶಾಲೆ ಆವರಣದಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ ವಿಚಾರವನ್ನ ಬಿಜೆಪಿ ರಾಜ್ಯಧ್ಯಕ್ಷ ನಳಿನ್ಕುಮಾರ್ ಕಟೀಲ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಭಜರಂಗದಳದ ಕಾರ್ಯಕರ್ತರಿಗೆ ಫೈರಿಂಗ್ ಟ್ರೈನಿಂಗ್ ಕೊಟ್ಟಿಲ್ಲ, ಅತಿ ಸಣ್ಣದಾದ ತ್ರಿಶೂಲ ಕೊಟ್ಟಿದ್ದಾರೆ. ಅದೂ ಸಹ ಕಾನೂನು ವಿರುದ್ಧವಾಗಲ್ಲ ಎಂದರು.
ಅಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಕರಾಟೆ, ಯೋಗ, ದೇಶ ಭಕ್ತಿ ಪ್ರೇರಣೆ ನೀಡುವ ತರಬೇತಿ ನೀಡಲಾಗುತ್ತದೆ. ರಜೆ ಅನ್ನೋ ಕಾರಣಕ್ಕೆ ಶಾಲಾ ಆವರಣ ಬಳಸಿಕೊಂಡಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ. ನಾರಾಯಣ ಸ್ವಾಮಿ ದಲಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ವಿಚಾರದಲ್ಲಿ ಹಾಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರನ್ನು ವಿಚಾರಿಸಿ ಈ ಬಗ್ಗೆ ಮಾತನಾಡುವೆ ಎಂದು ಹೇಳಿದರು.
ಪಠ್ಯದಲ್ಲಿ ಹೆಡ್ಗೆವಾರ್ ಬಗ್ಗೆ ಪಾಠ ಸೇರ್ಪಡೆ ವಿಚಾರವನ್ನು ಸಮರ್ಥಿಸಿಕೊಂಡ ನಳಿನ್ಕುಮಾರ್,ರಾಷ್ಟ್ರದ ಚಿಂತನೆ, ರಾಷ್ಟ್ರೀಯ ಭಕ್ತಿ ಕಲಿಸುವ ಸಂಸ್ಕಾರ ಕಲಿಸುವ ಎಲ್ಲ ಪಾಠಗಳೂ ಅಗತ್ಯವಿದೆ ಎಂದರು. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣ ಕುರಿತು ಮಾತನಾಡಿ, ನ್ಯಾಯಾಲಯದ ತೀರ್ಪಿನ ಪ್ರಕಾರ ಸಮೀಕ್ಷೆ ನಡೆಯುತ್ತಿದೆ. ಏನು ಕುರುಹು ಸಿಗುತ್ತೇ ? ನ್ಯಾಯಾಲಯ ಏನು ತೀರ್ಮಾನ ತಗೊಳ್ಳುತ್ತೆ ಎಂಬುವುದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಮಾಂಸಾಹಾರ ಸೇವೆನೆ ಪ್ರಕರಣ: ದತ್ತ ಪೀಠದಲ್ಲಿ ಮಾಂಸಾಹಾರ ಸೇವನೆ ವಿಚಾರವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತದೆ. ಆ ರೀತಿ ಆದ್ರೆ ಏನು ತಗೋಬೇಕೋ ಆ ಕ್ರಮ ನಮ್ಮ ಸರ್ಕಾರ ತೆಗೆದುಳ್ಳುತ್ತದೆ ಎಂದರು.
ಇದನ್ನೂ ಓದಿ: ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ತಲಾಶ್