ETV Bharat / state

ಕಾರು ಬಿಟ್ಟು ಬೈಕ್ ಮೇಲೆ ತೆರಳಿದ ಕಲಬುರಗಿ ಡಿಸಿ: ಗ್ರಾಮ ವಾಸ್ತವ್ಯದ ವೇಳೆ 85 ಅರ್ಜಿ ವಿಲೇವಾರಿ

ಕೆರೆ ಜಮೀನು ಪ್ರದೇಶ ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಒಳಗಡೆ ಇದ್ದ ಕಾರಣ, ಎತ್ತಿನ ಚಕ್ಕಡಿ ರಸ್ತೆಯಾದರಿಂದ ಕಾರು ಹೋಗುವಂತಿರಲಿಲ್ಲ. ಆದರೂ ಒತ್ತುವರಿ ಪ್ರದೇಶಕ್ಕೆ ತೆರಳಲು ನಿರ್ಧರಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್ ತಮ್ಮ ಕಾರಿನಿಂದ ಇಳಿದು ಸ್ಥಳೀಯರ ಬೈಕ್ ಹತ್ತಿ ನಡೆದರು.

Kalburagi DC went on bike to see the lake encroachment
ಬೈಕ್ ಮೇಲೆ ಒತ್ತುವರಿ ಪ್ರದೇಶಕ್ಕೆ ತೆರಳಿದ ಕಲಬುರಗಿ ಡಿಸಿ:
author img

By

Published : Oct 16, 2022, 8:55 AM IST

ಕಲಬುರಗಿ: ಐಶಾರಾಮಿ‌ ಕಾರು ಬಿಟ್ಟು ಬೈಕ್​ನಲ್ಲಿ ತೆರಳುವ ಮೂಲಕ ಜಿಲ್ಲಾಧಿಕಾರಿ ಯಶವಂತ ಗುರುಕರ್ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಸರಳತೆಗೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಶನಿವಾರ ಮಹಾರಾಷ್ಟ್ರ ಗಡಿ ಭಾಗದ ಅಫಜಲಪುರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಈ ವೇಳೆ ಗ್ರಾಮದಲ್ಲಿ 32 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ ಎಂಬ ಅಹವಾಲನ್ನು ಗ್ರಾಮದ ಕೆಲವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಗ್ರಾಮಸ್ಥರ ಅಹವಾಲು ಸ್ವಿಕರಿಸಿದ ಜಿಲ್ಲಾಧಿಕಾರಿ ಗುರುಕರ್, ಕೆರೆ ಒತ್ತುವರಿ ಪ್ರದೇಶಕ್ಕೆ ಖುದ್ದು ಭೇಟಿ ನೀಡಲು ಮುಂದಾದರು.‌ ಆದರೆ ಕೆರೆ ಜಮೀನು ಪ್ರದೇಶ ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಒಳಗಡೆ ಇದ್ದ ಕಾರಣ, ಎತ್ತಿನ ಚಕ್ಕಡಿ ರಸ್ತೆಯಾದರಿಂದ ಕಾರು ಹೋಗುವಂತಿರಲಿಲ್ಲ. ಆದರೂ ಒತ್ತುವರಿ ಪ್ರದೇಶಕ್ಕೆ ತೆರಳಲು ನಿರ್ಧರಿಸಿದ ಜಿಲ್ಲಾಧಿಕಾರಿಗಳು, ತಮ್ಮ ಕಾರಿನಿಂದ ಇಳಿದು ಸ್ಥಳೀಯರ ಬೈಕ್ ಹತ್ತಿ ನಡೆದರು. ಕೆರೆ ಒತ್ತುವರಿ ಜಾಗ ವೀಕ್ಷಣೆಗೆ ವಾಹನ ಹತ್ತಿ ಹೊರಟ ಜಿಲ್ಲಾಧಿಕಾರಿಗಳನ್ನು ಅಧಿಕಾರಿಗಳು‌, ಗ್ರಾಮಸ್ಥರು ಬೈಕ್‌ ಹತ್ತಿ ಹಿಂಬಾಲಿಸಿದರು.

Kalburagi DC went on bike to see the lake encroachment
ಬೈಕ್ ಮೇಲೆ ಒತ್ತುವರಿ ಪ್ರದೇಶಕ್ಕೆ ತೆರಳಿದ ಕಲಬುರಗಿ ಡಿಸಿ:

ಎಲ್ಲವು‌‌ ಕಣ್ಮುಂದೆ ಇದ್ದರೂ ನೋಡೋಣ, ಮಾಡೋಣ ಎಂದು ಅಧಿಕಾರಿಗಳು ಹೇಳೋದು ಕೇಳಿರುತ್ತೇವೆ. ಆದರೆ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಕಾರು ಹೋಗುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ ಬಿಸಿಲನ್ನು ಲೆಕ್ಕಿಸದೆ ಬೈಕ್ ಹತ್ತಿ ಜನರ ಸಮಸ್ಯೆ ಆಲಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಸ್ಥಳಗಳಿಗೆ ಖುದ್ದು ಭೇಟಿ: ರಸ್ತೆ ಹದಗೆಟ್ಟಿದೆ, ಮಳೆ ಬಂದರೆ ನೀರು ನಿಲ್ಲುತ್ತವೆ ಎಂಬಿತ್ಯಾದಿ ದೂರುಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದಿಟ್ಟು ಪರಿಹಾರಕ್ಕೆ ಕೋರಿಕೊಂಡರು. ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ‌ ಸುಧಾರಣೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ ಮಳೆ ನೀರು ನಿಲ್ಲುತ್ತಿರುವ ಜಾಗ ವೀಕ್ಷಿಸಿದ ಅವರು ಕೂಡಲೇ 15 ದಿನದಲ್ಲಿ ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸ್ಮಾಶನ ಸಹ ವೀಕ್ಷಿಸಿದರು. ಅರ್ಜುಣಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಒಟ್ಟಾರೆ 141 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ‌85 ಅರ್ಜಿಗಳನ್ನು ಸ್ಥಳದಲ್ಲಿಯೇ‌ ವಿಲೇವಾರಿ ಮಾಡಿದರು. ಉಳಿದ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದ ಇಲಾಖೆಗೆ ರವಾನಿಸಿದರು.

ಇದನ್ನೂ ಓದಿ: ಕಲಬುರಗಿ : ಸಕ್ಕರೆ ಕಾರ್ಖಾನೆಗಳಿಗೆ ಚಾಟಿ ಬೀಸಿದ ಜಿಲ್ಲಾಡಳಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.