ETV Bharat / business

ಮಹಿಳೆಯರಿಗೆ ಖುಷಿ ವಿಚಾರ: ಚಿನ್ನದ ಬೆಲೆಯಲ್ಲಿ 2100 ರೂ ಕುಸಿತ, ಬೆಳ್ಳಿ 4 ಸಾವಿರ ರೂ. ಇಳಿಕೆ

ಅಮೆರಿಕದ ಚುನಾವಣೆಯ ನಂತರ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹ 2,100 ಮತ್ತು ಬೆಳ್ಳಿಯ ಬೆಲೆಯಲ್ಲಿ ಕೆ.ಜಿಗೆ ₹ 4,050 ಇಳಿಕೆಯಾಗಿದೆ.

Gold Prices Fall Further After Donald Trump's Win
ಮಹಿಳೆಯರಿಗೆ ಖುಷಿ ವಿಚಾರ: ಅಮೆರಿಕದಲ್ಲಿ ಸರ್ಕಾರ ಬದಲಾವಣೆ: ಚಿನ್ನದ ಬೆಲೆಯಲ್ಲಿ 2100 ರೂ ಕುಸಿತ, ಬೆಳ್ಳಿ 4 ಸಾವಿರ ರೂ. ಇಳಿಕೆ (Getty images)
author img

By ETV Bharat Karnataka Team

Published : Nov 7, 2024, 3:39 PM IST

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ಬೆಲೆಗಳು ಕುಸಿಯುತ್ತಲೇ ಇವೆ. ಗುರುವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ಡಿಸೆಂಬರ್ ಭವಿಷ್ಯದ ಒಪ್ಪಂದಗಳು( ಅಂದರೆ Future) ಶೇಕಡಾ 0.37 ರಷ್ಟು ಕುಸಿತದೊಂದಿಗೆ 10 ಗ್ರಾಂಗೆ ₹ 76,369 ಕ್ಕೆ ಪ್ರಾರಂಭವಾದರೆ, ಬೆಳ್ಳಿ ಡಿಸೆಂಬರ್ ಭವಿಷ್ಯದ ಒಪ್ಪಂದಗಳ ಅನ್ವಯ ಶೇಕಡಾ 0.24 ರಷ್ಟು ವಹಿವಾಟು ನಡೆಸುತ್ತಿವೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹ 2,100 ಮತ್ತು ಬೆಳ್ಳಿ ಬೆಲೆ ಕೆ.ಜಿಗೆ ₹ 4,050 ಇಳಿಕೆಯಾಗಿದೆ.

ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ (IBJA) ಪ್ರಕಾರ, 24-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 76,570, 22-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 74,720, 20 -ಕ್ಯಾರೆಟ್ ಚಿನ್ನದ ಬೆಲೆ ₹ 10 ಗ್ರಾಂಗೆ 68,130 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 62,201 ಆಗಿದೆ.

ಅಮೆರಿಕ ಅಧ್ಯಕ್ಷೀಯ ರೇಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದರಿಂದ ಚಿನ್ನ ಮತ್ತು ಇತರ ಹೆಚ್ಚಿನ ಸರಕುಗಳು ಋಣಾತ್ಮಕ ಪ್ರದೇಶದಲ್ಲಿ ವಹಿವಾಟು ನಡೆಸುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಇಂದು ರೂ. 78,500 ಮತ್ತು ₹ 77,500 ನಡುವೆ ವಹಿವಾಟು: ಅಮೆರಿಕ ಚುನಾವಣಾ ಫಲಿತಾಂಶವು ಡಾಲರ್ ಸೂಚ್ಯಂಕವನ್ನು 105 ಕ್ಕೆ ಏರಿಸಿದ ಕಾರಣ, ಚಿನ್ನದ ಬೆಲೆಗಳು ತೀವ್ರ ಚಂಚಲತೆಯನ್ನು ಅನುಭವಿಸಿದವು. ಪ್ರತಿ 10 ಗ್ರಾಂಗೆ ₹ 78,500 ಮತ್ತು ₹ 77,500 ರ ನಡುವೆ ತೀವ್ರವಾಗಿ ಏರಿಳಿತಗೊಂಡವು. ಈ ಡಾಲರ್ ಶಕ್ತಿಯು ಚಿನ್ನವನ್ನು 10 ಗ್ರಾಂಗೆ ₹ 77,500 ಮತ್ತು ಡಾಲರ್ ಮೌಲ್ಯದಲ್ಲಿ $ 2,700 ಗೆ ತಳ್ಳಿತು" ಎಂದು ಆರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬಹುದು.

ಸ್ಪಾಟ್ ಗೋಲ್ಡ್ ಬೆಲೆ; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿದೆ. ಬುಧವಾರ, ಒಂದು ಔನ್ಸ್ ಚಿನ್ನದ ಬೆಲೆ 2,740 ಡಾಲರ್‌ಗಳಷ್ಟಿತ್ತು. ಆದರೆ, ಗುರುವಾರದ ವೇಳೆಗೆ ಅದು 81 ಡಾಲರ್‌ಗೆ ಇಳಿದು 2,659 ಡಾಲರ್‌ಗಳಿಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.07 ಡಾಲರ್ ಆಗಿದೆ.

ಸ್ಟಾಕ್ ಮಾರುಕಟ್ಟೆ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಫ್ಲಾಟ್ ಆಗಿ ಪ್ರಾರಂಭವಾದವು. ಗುರುವಾರ, ಬುಧವಾರದ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿದ್ದ ಸೂಚ್ಯಂಕಗಳು ಇಂದು ಕುಸಿತದ ಹಾದಿ ಹಿಡಿದವು. ದಿನದ ಅಂತ್ಯದಲ್ಲಿ ನಿಫ್ಟಿ 286 ಅಂಕ ನಷ್ಟ ಅನುಭವಿಸಿ 24,198.65ರಲ್ಲಿ ವಹಿವಾಟು ಮುಗಿಸಿತು. ಇನ್ನು ಸೆನ್ಸೆಕ್ಸ್​ ಕೂಡಾ 835 ಅಂಕ ಕುಸಿತ ಕಂಡು, 79,542.24 ಕ್ಕೆ ದಿನದ ವ್ಯವಹಾರವನ್ನು ಕೊನೆಗೊಳಿಸಿತು. ಹೂಡಿಕೆದಾರರು ಪ್ರಮುಖ ಷೇರುಗಳ ಮಾರಾಟ ಮಾಡಿದ್ದರಿಂದ ಸೂಚ್ಯಂಕಗಳು ನಷ್ಟದಲ್ಲಿ ಉಳಿದವು.

ರೂಪಾಯಿ ಮೌಲ್ಯ: ಪ್ರಸ್ತುತ, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ವಿನಿಮಯ ದರವು ರೂ.84.26 ಆಗಿದೆ.

ಇದನ್ನು ಓದಿ: ವದಂತಿ ನಂಬದೇ 10 ರೂ. ನಾಣ್ಯ ಚಲಾವಣೆ ಮಾಡಿ; ಚಾಮರಾಜನಗರ ಡಿಸಿ ಮನವಿ

ದಾಖಲೆಯ 1,647 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಸಾಧ್ಯತೆ: ಈಗಲಾದರೂ ತಗ್ಗಬಹುದೇ ಆಹಾರ ಹಣದುಬ್ಬರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.