ಕಲಬುರಗಿ: ನಗರದ ಜಿಮ್ಸ್ ಕೋವಿಡ್ ವಾರ್ಡ್ನಲ್ಲಿ ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣದ ಸಂತ್ರಸ್ತೆ ಇಂದು ಉಸಿರು ಚೆಲ್ಲಿದ್ದಾಳೆ. ಕಾಮುಕನ ಅಟ್ಟಹಾಸದಿಂದ ನಲುಗಿದ್ದ ಯುವತಿ ವಾರದ ಬಳಿಕ ಕೊನೆಯುಸಿರೆಳೆದಿದ್ದಾಳೆ. ದುಷ್ಕೃತ್ಯವೆಸಗಿದ್ದ ಕಾಮುಕ ಕಂಬಿ ಈಗ ಎಣಿಸುತ್ತಿದ್ದಾನೆ.
ಜೂನ್ 8ರ ರಾತ್ರಿ ಖಾಸಗಿ ಆ್ಯಂಬುಲನ್ಸ್ ಚಾಲಕ ಪಿಂಟು ಎಂಬ ಕಾಮುಕ, ಯುವತಿಯ ಡೈಪರ್ ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಯುವತಿ ಚಿರಾಡಿದ ಬಳಿಕ ಕಾಮುಕ ಅಲ್ಲಿಂದ ಕಾಲ್ಕಿತ್ತಿದ್ದ.
ಘಟನೆ ನಂತರ ಮಾನಸಿಕವಾಗಿ ಮತ್ತಷ್ಟು ನೊಂದಿದ್ದ ಯುವತಿಗೆ ಕೊರೊನಾ ಸೋಂಕಿನ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾಳೆ.
ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಓದಿ.. ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಡ್ರೈವರ್ನಿಂದ ಅತ್ಯಾಚಾರಕ್ಕೆ ಯತ್ನ, ಆರೋಪ!