ETV Bharat / state

ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: 141 ಸದಸ್ಯರು ಅವಿರೋಧ ಆಯ್ಕೆ

author img

By

Published : Dec 16, 2020, 3:41 PM IST

ಡಿ.22ರಂದು ಕಲಬುರಗಿ ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳಲ್ಲಿ ಮೊದಲನೇ ಹಂತದ ಮತದಾನ ನಡೆಯಲಿದೆ.

Grama panchayat election
ಗ್ರಾಮ ಪಂಚಾಯಿತಿ ಚುನಾವಣೆ

ಕಲಬುರಗಿ: ಡಿ.22ರಂದು ನಡೆಯುವ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಒಟ್ಟು 5,876 ಅಭ್ಯರ್ಥಿಗಳು ಕಣದಲ್ಲಿದ್ದು, 141 ಜನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಕಲಬುರಗಿ, ಶಹಾಬಾದ್, ಆಳಂದ, ಅಫಜಲಪುರ, ಕಮಲಾಪುರ, ಕಾಳಗಿ ತಾಲೂಕುಗಳಲ್ಲಿ ಪ್ರಥಮ ಹಂತದ ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ 141 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಓದಿ...ನೀತಿ ಸಂಹಿತೆ ಉಲ್ಲಂಘನೆ ಆರೋಪ : ರೇವೂರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು

126 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯಲಿದೆ. 126 ಪಂಚಾಯತಿಗಳಿಗೆ 2,220 ಸದಸ್ಯ ಸ್ಥಾನಗಳಿದ್ದು, ಈಗಾಗಲೇ 141 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಉಳಿದ 2,096 ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು 5,876 ಅಭ್ಯರ್ಥಿಗಳ ಕಣದಲ್ಲಿ ಉಳಿದಿದ್ದಾರೆ. ಇನ್ನೂ 1,480 ಜನ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ.

ಸದ್ಯ ಎರಡನೇ ಹಂತದ ಚುನಾವಣೆ ಡಿ. 27ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.