ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ 624 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಐಸಿಯು ಬೆಡ್ಗಾಗಿ ಸಾಕಷ್ಟು ಒತ್ತಡಗಳು ಬರ್ತಿವೆ ಎಂದು ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ ತಿಳಿಸಿದರು.
ಕಲಬುರಗಿ ನಗರದಲ್ಲೇ 60% ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಮೂರು ನಾಲ್ಕು ದಿನಗಳಿಂದ ಬಂದಿರುವ ಕೇಸ್ ಗಳಲ್ಲಿ ಎಲ್ಲರೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 17 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಗಾಗಿ ತೆಗೆದುಕೊಳ್ಳಲಾಗಿದೆ. ಎಲ್ಲರೂ ಆಸ್ಪತ್ರೆಯಲ್ಲಿ ದಾಖಲಾದರೆ ರೋಗ ಲಕ್ಷಣ ಮತ್ತು ಸಿರಿಯಸ್ ಕೇಸ್ ಗಳಿಗೆ ಬೆಡ್ ಸಿಗುವುದಿಲ್ಲ. ಹೀಗಾಗಿ ಯಾವುದೆ ರೋಗ ಲಕ್ಷಣ ಇಲ್ಲದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ರೆಡಿ ಮಾಡಲಾಗಿದೆ. ಪ್ರತಿನಿತ್ಯ 900 ಆಕ್ಸಿಜನ್ ಗ್ಯಾಸ್ ಖಾಲಿ ಯಾಗುತ್ತಿವೆ. ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಕೂಡ ಹೆಚ್ಚಾಗುತ್ತಿದೆ. ಕಲಬುರಗಿಯಲ್ಲಿ ಮೂರು ಆಕ್ಸಿಜನ್ ಯೂನಿಟ್ ಗಳಿವೆ. ಇದರ ಜೊತೆಗೆ ರಾಯಚೂರು ಮತ್ತು ಬಳ್ಳಾರಿಯಿಂದ ಕೂಡ ಲಿಕ್ವಿಡ್ ತರಿಸಿಕೊಳ್ಳೋಕೆ ಮುಂದಾಗಿದ್ದೇವೆ. ಕಲಬುರಗಿಯಲ್ಲಿ 131 ವೆಂಟಿಲೇಟರ್ ಬೆಡ್ ಗಳ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಲಾಕ್ ಡೌನ್ ನಿರ್ಧಾರ ಸರ್ಕಾರದ ಮಾಡುತ್ತೆ : ಲಾಕ್ ಡೌನ್ ಮಾಡುವುದಕ್ಕೆ ನಮಗೆ ಯಾವುದೆ ಅಧಿಕಾರವಿಲ್ಲ. ಲಾಕ್ ಡೌನ್ ಮಾಡುವ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳುತ್ತದೆ. ಅತಿ ಹೆಚ್ಚು ಕೇಸ್ ಪೆತ್ತೆಯಾಗುವ ಏರಿಯಾಗಳನ್ನ ಕಂಟೋನ್ಮೆಂಟ್ ಝೋನ್ ಮಾಡಲಾಗುತ್ತೆ. ಸಾರ್ವಜನಿಕರು ಕೋವಿಡ್ ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕು. ನಾವು ಸರ್ಕಾರದ ಗಮನಕ್ಕೆ ತರಬಲ್ಲೆವೂ ಅಷ್ಟೇ. ಲಾಕ್ ಡೌನ್ ಮಾಡುವ ಅಧಿಕಾರ ನಮಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನ ಲಾಕ್ ಮಾಡುವುದಿಲ್ಲ. ಕಲಬುರಗಿಯಲ್ಲಿರುವ ಯಾವ ದೇವಸ್ಥಾನವನ್ನೂ ಲಾಕ್ ಮಾಡುವುದಿಲ್ಲ. ಜಾತ್ರೆ, ಉತ್ಸವಗಳಿಗೆ ಇಗಾಗಲೇ ನಿರ್ಬಂಧ ಹೇರಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿಕೊಂಡು ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಮಾಡಲು ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಓದಿ : ಕೋವಿಡ್ ಸಾವು : ವಾಸ್ತವ ಪ್ರಕರಣ ಮತ್ತು ಸರ್ಕಾರದ ಅಂಕಿ ಅಂಶದಲ್ಲಿ ಭಾರಿ ವ್ಯತ್ಯಾಸ!