ಕಲಬುರಗಿ: ಜಿಲ್ಲೆಯ ಜನರನ್ನು ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಹೊಸ ಪ್ಲಾನ್ಗೆ ಮುಂದಾಗಿದೆ.
ಕಲಬುರಗಿ ನಗರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲೇ ಸಾಗುತ್ತಿದ್ದು, ಸಾವಿನ ಸಂಖ್ಯೆ ಕೂಡ 111ಕ್ಕೆ ತಲುಪಿದೆ. ಈ ನಿಟ್ಟಿನಲ್ಲಿ ಮಹಾಮಾರಿ ವೈರಸ್‌ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ನಗರದ ವಿವಿಧ ಬಡಾವಣೆಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ವಿಶೇಷ ಆರೋಗ್ಯ ತಪಾಸಣಾ ಚಿಕಿತ್ಸೆ ನಡೆಸುತ್ತಿದೆ. ಆ. 3 ರಿಂದ 10ರ ವರೆಗೆ ನಗರದ ವಿವಿಧ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಕೋವಿಡ್-19 ನಿಂದ ಮರಣ ಪ್ರಮಾಣ ತಗ್ಗಿಸಲು ಮಧುಮೇಹ ಮತ್ತು ರಕ್ತದೊತ್ತಡ ಇರುವ ವ್ಯಕ್ತಿಗಳನ್ನು ಈಗಾಗಲೇ ಮನೆ-ಮನೆ ಸರ್ವೆ ಮೂಲಕ ಗುರುತಿಸಿದ್ದು, ಇವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಮತ್ತು ವೈದ್ಯಕೀಯ ಸಲಹೆ ನೀಡಲು ಈ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ನಿಗದಿತ ದಿನಾಂಕದಂದು ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಮತ್ತು ಸಲಹೆ ಪಡೆದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಮನವಿ ಮಾಡಿದ್ದಾರೆ.
ಆರೋಗ್ಯ ತಪಾಸಣೆ ನಡೆಯುವ ದಿನಾಂಕ ಮತ್ತು ಸ್ಥಳಗಳ ವಿವರ:
- ದಿ. 03-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಶಾಜಿಲಾನಿ ದರ್ಗಾ 2ನೇ ಅಂಗನವಾಡಿ ಕೇಂದ್ರ, ಐಸಿಡಿಎಸ್ ಆರೋಗ್ಯ ಕೇಂದ್ರದಿಂದ ಸಾಯಿ ಮಂದಿರ ಗಾರ್ಡನ್ ಹತ್ತಿರ ಹಾಗೂ ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ವೀರಭದ್ರೇಶ್ವರ ಗುಡಿ ಹತ್ತಿರದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
- ದಿ.04-08-2020 ರಂದು ಮಕ್ತಂಪೂರ ನಗರ ಆರೋಗ್ಯ ಕೇಂದ್ರದಿಂದ ಮಕ್ತಂಪುರ ಅಂಗನವಾಡಿ ಕೇಂದ್ರ-1, ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಎಸ್.ಎಂ.ಕೃಷ್ಣ ಕಾಲೋನಿ ಅಂಗನವಾಡಿ ಕೇಂದ್ರ, ಎಸ್.ಆರ್.ನಗರ ಆರೋಗ್ಯ ಕೇಂದ್ರದಿಂದ ಖಮರ್ ಕಾಲೋನಿ ಅಂಗನವಾಡಿ ಕೇಂದ್ರ ಹಾಗೂ ಶಹಾಬಜಾರ್ ನಗರ ಆರೋಗ್ಯ ಕೇಂದ್ರದಿಂದ ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರ-1ರಲ್ಲಿ ಶಿಬಿರ ಆಯೋಜಿಸಲಾಗಿದೆ.
- ದಿ.05-08-2020 ರಂದು ಶಿವಾಜಿನಗರ ನಗರ ಆರೋಗ್ಯ ಕೇಂದ್ರದಿಂದ ಮಹಾದೇವ ಮಂದಿರ ರಾಮ ನಗರ, ಸೇಂಟ್ ಜಾನ್ ಆರೋಗ್ಯ ಕೇಂದ್ರದಿಂದ ಸಮದಾಯ ಭವನ ಗಾಜೀಪೂರ, ಯು.ಎಫ್.ಡಬ್ಲ್ಯುಸಿ ಆರೋಗ್ಯ ಕೇಂದ್ರದಿಂದ ಅಂಬೇಡ್ಕರ ಸಮುದಾಯ ಭವನ ಹಾಗೂ ಯು.ಎಫ್.ಡಬ್ಲ್ಯುಸಿ ಆರೋಗ್ಯ ಕೇಂದ್ರದಿಂದ ಮಲ್ಲಿಕಾರ್ಜುನ ಗುಡಿ ಅಂಗನವಾಡಿ ಕೇಂದ್ರ-1ರಲ್ಲಿ ವಿಶೇಷ ಚಿಕಿತ್ಸಾ ಶಿಬಿರ ಇರಲಿದೆ.
- ದಿ.06-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರದಿಂದ ಕೃಷ್ಣಾ ನಗರ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಗಣೇಶ ನಗರ ಬಿದ್ದಾಪುರ ಕಾಲೋನಿ, ಐ.ಸಿ.ಡಿ.ಎಸ್ ಆರೋಗ್ಯ ಕೇಂದ್ರದಿಂದ ಸಮುದಾಯ ಭವನ ಪಂಚಶೀಲ ನಗರ ಹಾಗೂ ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ಯಾದುಲ್ಲಾ ಕಾಲೋನಿ ಅಂನವಾಡಿ ಕೇಂದ್ರ-2ರಲ್ಲಿ ತಪಾಸಣೆ ನಡೆಯಲಿದೆ.
- ದಿ.07-08-2020 ರಂದು ಮಕ್ತಂಪೂರ ನಗರ ಆರೋಗ್ಯ ಕೇಂದ್ರದಿಂದ ಮಕ್ತಂಪುರ ಅಂಗನವಾಡಿ ಕೇಂದ್ರ-1, ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಶಿವಲಿಂಗೇಶ್ವರ ಮಂದಿರ ಅಂಗನವಾಡಿ ಕೇಂದ್ರ, ಎಸ್.ಆರ್.ನಗರ ಆರೋಗ್ಯ ಕೇಂದ್ರದಿಂದ ಮಹೆಬೂಬ್ ನಗರ ಅಂಗನವಾಡಿ ಕೇಂದ್ರ-1 ಹಾಗೂ ಶಹಾಬಜಾರ್ ನಗರ ಆರೋಗ್ಯ ಕೇಂದ್ರದಿಂದ ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರ-2ರಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
- ದಿ.08-08-2020 ರಂದು ಶಿವಾಜಿನಗರ ನಗರ ಆರೋಗ್ಯ ಕೇಂದ್ರದಿಂದ ಅಂಬಾಭವಾನಿ ಗುಡಿ ಶಿವಾಜಿನಗರ ಅಂಗನವಾಡಿ ಕೇಂದ್ರ-1, ಸೆಂಟ್ ಜಾನ್ ಆರೋಗ್ಯ ಕೇಂದ್ರದಿಂದ ಭವಾನಿ ಮಂದಿರ, ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಮಲ್ಲಿಕಾರ್ಜುನ ಮಂದಿರ ಹಾಗೂ ಯು.ಎಫ್.ಡಬ್ಲ್ಯೂ.ಸಿ ಆರೋಗ್ಯ ಕೇಂದ್ರದಿಂದ ಹೆರಿಗೆ ಆರೋಗ್ಯ ಕೇಂದ್ರ ತಾರಫೈಲ್ ಇಲ್ಲಿ ಶಿಬಿರ ನಡೆಯಲಿದೆ.
- ದಿ.10-08-2020 ರಂದು ಅಶೋಕ ನಗರ ಆರೋಗ್ಯ ಕೇಂದ್ರದಿಂದ ಶಿವದತ್ತ ಮಠ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಅಂಗನವಾಡಿ ಕೇಂದ್ರ-4 ಬಿದ್ದಾಪುರ, ಐ.ಸಿ.ಡಿ.ಎಸ್ ಆರೋಗ್ಯ ಕೇಂದ್ರದಿಂದ ಡಿಸ್ಪೆನ್ಸರಿ ಪೊಲೀಸ್ ಕಾಲೋನಿ ಹಾಗೂ ಖಾನಾಪೂರ ನಗರ ಆರೋಗ್ಯ ಕೇಂದ್ರದಿಂದ ಸೈಯದ್ ಗಲ್ಲಿ ಇಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
ಒಟ್ಟಿನಲ್ಲಿ ಹೆಮ್ಮಾರಿ ಕೊರೊನಾ ಸೋಂಕು ಬಿಸಿಲು ನಾಡು ಕಲಬುರಗಿಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಕೂಡ ವ್ಯಾಪಿಸುತ್ತಿದ್ದು, ಜಿಲ್ಲಾಡಳಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದೆ.