ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಡಿಸಿಯಾಗಿ ವಿಕಾಸ್ ಕಿಶೋರ್ ಅವರನ್ನು ನಿಯೋಜಿಸಲಾಗಿದೆ.
ತಮಗೆ ಸಿಕ್ಕ ಅಲ್ಪಾವಧಿಯಲ್ಲಿ ಜಿಲ್ಲೆಯಲ್ಲಿ ಉತ್ತಮ ಸೇವೆ ಮಾಡಿದ ಬಿ.ಶರತ್ ಅವರು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸೆಕ್ಸಸ್ನಿಂದ ಹಿಡಿದು ಕೊರೊನಾ ವೈರಸ್ ನಿಯಂತ್ರಣಕ್ಕೆ ಶ್ರಮವಹಿಸಿದ್ದರು.
![Kalaburagi DC transfer in-between the lockdown](https://etvbharatimages.akamaized.net/etvbharat/prod-images/kn-klb-02-dc-trencfer-ka10021_28042020200702_2804f_1588084622_409.jpg)
ಇದೀಗ ಜಿಲ್ಲಾಧಿಕಾರಿ ಶರತ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರ ಜಾಗಕ್ಕೆ ನೂತನ ಡಿಸಿಯಾಗಿ ವಿಕಾಸ ಕಿಶೋರ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಅಲ್ಲದೇ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಸೂಚಿಸಿದೆ.
![Kalaburagi DC transfer in-between the lockdown](https://etvbharatimages.akamaized.net/etvbharat/prod-images/kn-klb-02-dc-trencfer-ka10021_28042020200702_2804f_1588084622_1045.jpg)