ಕಲಬುರಗಿ: ಪಕ್ಷಿಗಳ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ, ಕಲಬುರಗಿಯ ಕುಟುಂಬವೊಂದು ಜನ ಮೆಚ್ಚುವ ಕೆಲಸ ಮಾಡುತ್ತಿದ್ದು, ಜನಮೆಚ್ಚುಗೆ ಪಾತ್ರವಾಗಿದೆ. ಪ್ರತಿದಿನವೂ ಡಬ್ಬಿಗಳಲ್ಲಿ ಆಹಾರ ತುಂಬಿ ಶಿವು ದೊಡ್ಮನಿ ಮತ್ತು ರೇಷ್ಮಾ ದಂಪತಿ ಪಕ್ಷಿಗಳ ಹಸಿವು ನೀಗಿಸುತ್ತಾರೆ.
ಇದಕ್ಕಾಗಿಯೇ 'ಬರ್ಡ್ ಫುಡ್ ಫೀಡರ್' ಎಂಬ ಹೊಸ ಯೋಜನೆ ರೂಪಿಸಿದ್ದಾರೆ. ಪಕ್ಷಿಗಳು ಹಸಿವಿನಿಂದ ಪರದಾಡುವುದನ್ನು ನೋಡಿದ ಈ ದಂಪತಿ, ಅದಕ್ಕಾಗಿ ತಮ್ಮ 'ಬದುಕು' ಫೌಂಡೇಷನ್ ಮೂಲಕ ನಗರದ ವಿವಿಧ ಬಡಾವಣೆಯ ಗಿಡ-ಮರಕ್ಕೆ ಫುಡ್ ಫೀಡರ್ ಅಳವಡಿಸುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೋಟೆಲ್, ಕಿರಾಣಿ ಅಂಗಡಿಗಳು ಮುಚ್ಚಿದ್ದರಿಂದ ಪಕ್ಷಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಆಗ ಅವುಗಳ ರೋಧನೆ ಕಂಡು ಮೂಕ ಜೀವಿಗಳಿಗೆ ನೆರವಾಗಿದ್ದಾರೆ. ಆದರೆ ಇಂತಹದೊಂದು ಫೀಡರ್ ಕಾನ್ಸೆಪ್ಟ್ ಶುರುಮಾಡಿದ್ದು ಇತ್ತೀಚೆಗೆ. ಅದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ನಾಸಿಕ್ನಿಂದ ಈ ಸಾಧನಗಳನ್ನ ತರಿಸಿದ್ದಾರೆ. ಮನೆಯವರೆಲ್ಲಾ ಕುಳಿತು ಫೀಡರ್ಗಳಿಗೆ ಅಕ್ಕಿ, ಜೋಳ, ಸಜ್ಜೆ ಕಾಳುಗಳನ್ನ ತುಂಬುತ್ತಾರೆ. ಮಾತ್ರವಲ್ಲ ತಾವೇ ಖುದ್ದಾಗಿ ಮರಗಿಡಗಳಿಗೆ ಅಳವಡಿಸುತ್ತಾರೆ.
'ಬದುಕು' ಫೌಂಡೇಷನ್ ಮಾಡಿದ ಈ ಕಾರ್ಯಕ್ಕೆ ಪಾಲಿಕೆ ಆಯುಕ್ತ ಲೋಖಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಮಾತ್ರವಲ್ಲ ಪಾಲಿಕೆ ಆವರಣದಲ್ಲಿ ತಾವೇ ಮರವೇರಿ ಫೀಡರ್ ಅಳವಡಿಸಿದ್ದಾರೆ.
ಓದಿ: 'ಸಿದ್ದರಾಮಯ್ಯ ಬಕ್ರಾ ಮಾಡಿದ್ದು ಕುಮಾರಸ್ವಾಮಿಗೆ ತಡವಾಗಿ ಜ್ಞಾನೋದಯವಾಗಿದೆ'