WhatsApp Group Notifications Feature: ವಾಟ್ಸ್‌ಆ್ಯಪ್ ತನ್ನ ಗ್ರಾಹಕರಿಗೆ ಹೊಸ ಫೀಚರ್ ಪರಿಚಯಿಸಿದೆ. ಇದು ಗ್ರೂಪ್ ನೋಟಿಫಿಕೇಶನ್ ನಿರ್ವಹಿಸಲು ಅವಕಾಶ ಕಲ್ಪಿಸುತ್ತದೆ. ಗ್ರೂಪ್ನಲ್ಲಿ ಬರುವ ಸಂದೇಶಗಳು ಎಷ್ಟು ಕಿರಿಕಿರಿ ಉಂಟು ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾವುದೇ ಕೆಲಸ ಅಥವಾ ಇನ್ನಿತರ ಚಟುವಟಿಕೆಯಲ್ಲಿ ನಿರತರಾಗಿರುವಾಗ ಫೋನ್ ಸದ್ದು ಮಾಡುತ್ತದೆ. ಇದರಿಂದ ನಮಗಷ್ಟೇ ಅಲ್ಲದೇ, ಪಕ್ಕದಲ್ಲಿರುವವರಿಗೂ ಕಿರಿಕಿರಿಯಾಗುತ್ತದೆ.
ಫೋನ್ ಸದ್ದು ಮಾಡಿದ ತಕ್ಷಣವೇ ನಾವು ಯಾರ ಸಂದೇಶ ಬಂತು ಎಂದು ಚೆಕ್ ಮಾಡುತ್ತೇವೆ. ಆಗ ನಮಗೆ ಇಷ್ಟವಿಲ್ಲದ ಸಂದೇಶವನ್ನು ನೋಡಿ ಕೊಂಚ ಬೇಸರಗೊಳ್ಳುತ್ತೇವೆ. ಹೀಗಾಗಿ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಗ್ರೂಪ್ ನೋಟಿಫಿಕೇಶನ್ ಆಫ್ ಮಾಡಲು ಅವಕಾಶ ನೀಡಿದೆ. ವಾಟ್ಸ್‌ಆ್ಯಪ್ ಅಪ್ಡೇಟ್ ಮಾಡುವ ಮೂಲಕ ನೀವು ಈ ಫೀಚರ್ನ ಲಾಭ ಪಡೆಯಬಹುದು.
WABetainfo ವೆಬ್ಸೈಟ್ ಈ ಕುರಿತ ಸ್ಕ್ರೀನ್ಶಾಟ್ ಹಂಚಿಕೊಂಡಿದೆ. ಗ್ರೂಪ್ ಚಾಟ್ಗಳಿಗೆ ಅಲರ್ಟ್‌ಗಳನ್ನು ನಿರ್ವಹಿಸುವಾಗ ಬಳಕೆದಾರರು ಆ್ಯಕ್ಟಿವಿಟಿ ಫೀಚರ್ ಅನ್ನು ನೋಡಬಹುದು. ಪ್ರತಿಯೊಂದು ಗ್ರೂಪ್ ಚಾಟ್ಗಳ ನೋಟಿಫಿಕೇಶನ್ ಅನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಕಲ್ಪಿಸಲಾಗಿದೆ. ಹೊಸ ಹೈಲೆಟ್ಸ್ಗಳ ಆಯ್ಕೆಯನ್ನೂ ಪಡೆಯಬಹುದು.
ಗ್ರೂಪ್ ನೋಟಿಫಿಕೇಶನ್ ಮ್ಯೂಟ್ ಮಾಡುವುದು ಹೇಗೆ?: ವಾಟ್ಸ್‌ಆ್ಯಪ್ ಬಳಕೆದಾರರು ತಮಗೆ ಬೇಕಾದ ಗ್ರೂಪ್ ನೋಟಿಫಿಕೇಶ್ ಅನ್ನು ಸುಲಭವಾಗಿ ಮ್ಯೂಟ್ ಮಾಡಬಹುದು. ಅಷ್ಟೇ ಅಲ್ಲ, ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಮುಖ್ಯವಾದ ಗ್ರೂಪ್ಗಳಿಗೆ ಮಾತ್ರ ನೋಟಿಫಿಕೇಶನ್ ಸಂದೇಶ ಬರುವಂತೆ ಸೆಟ್ ಮಾಡಿಕೊಳ್ಳಬಹುದು. ಹೌದು, ಪ್ರತೀ ಮೆಸೇಜ್ಗೆ ನೋಟಿಫಿಕೇಶನ್ ಪಡೆಯುವ ಬದಲು ಬಳಕೆದಾರರು ಅವರಿಗೆ ಸಂಬಂಧಿಸಿದ ಗ್ರೂಪ್ ಚಾಟ್ಗಳಿಗೆ ಮಾತ್ರ ನೋಟಿಫಿಕೇಶನ್ ಪಡೆಯಬಹುದಾಗಿದೆ.
ಈ ಫೀಚರ್ ವರ್ಷಗಳಿಂದ ಡೀಫಾಲ್ಟ್ ಆಗಿದೆ. ಆದ್ರೆ ಬಳಕೆದಾರರು ಗುಂಪು ಅಧಿಸೂಚನೆಗಳನ್ನು ಹೇಗೆ ಮ್ಯೂಟ್ ಮಾಡಬಹುದು ಎಂಬುದರ ಕುರಿತು ವಾಟ್ಸ್‌ಆ್ಯಪ್ ಈಗ ಎಚ್ಚೆತ್ತುಕೊಂಡಿದೆ. ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯ. ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವುದು.
ಇದನ್ನೂ ಓದಿ: ಬಿಎಸ್ಎನ್ಎಲ್ನಿಂದ ಹೊಸ ಸೇವೆಗಳ ಘೋಷಣೆ; 500 ಲೈವ್ ಚಾನೆಲ್ ಫ್ರೀ