ETV Bharat / state

ಕಲಬುರಗಿ: ಶ್ರೀಶರಣಬಸವೇಶ್ವರ ಅಪ್ಪಾ ಕೆರೆಯಲ್ಲಿ ಎಮ್ಮೆ ತೊಳೆದ ಮಾಲೀಕರ ವಿರುದ್ಧ ಪ್ರಕರಣ ದಾಖಲು

ಕಲಬುರಗಿಯ ಶ್ರೀಶರಣಬಸವೇಶ್ವರ ಅಪ್ಪಾ ಕೆರೆ ಸುತ್ತಮುತ್ತಲ ಪ್ರದೇಶವನ್ನು 'ಅಪಾಯಕಾರಿ ನಿಷೇಧಿತ ಪ್ರದೇಶ' ಎಂದು ಆಯುಕ್ತರು ಘೋಷಿಸಿದ್ದಾರೆ.

ಕೆರೆಯಲ್ಲಿ ಎಮ್ಮೆ ತೊಳೆದ ಮಾಲಿಕರ ವಿರುದ್ಧ ಪ್ರಕರಣ ದಾಖಲು

author img

By

Published : Aug 11, 2023, 9:57 PM IST

ಕಲಬುರಗಿ : ಒಂದು ಕಾಲದಲ್ಲಿ ಪ್ರವಾಸಿಗರನ್ನು ಕೈ‌ಬೀಸಿ‌ ಕರೆಯುತ್ತಿದ್ದ ನಗರದ ಶ್ರೀ ಶರಣಬಸವೇಶ್ವರ ಅಪ್ಪಾ ಕರೆ ಈಗ ಎಮ್ಮೆಗಳನ್ನು ತೊಳೆಯುವ ಗುಂಡಿಯಾಗಿ ಪರಿವರ್ತನೆಯಾಗಿದೆ. ನಿತ್ಯ ಎಮ್ಮೆಗಳನ್ನು ಇದೇ ನೀರಿನಲ್ಲಿ ತೊಳೆಯಲಾಗುತ್ತದೆ. ಇದೀಗ ಎಚ್ಚೆತ್ತ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆರೆಯಲ್ಲಿ ಎಮ್ಮೆಗಳನ್ನು ತೊಳೆದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಲಬುರಗಿ ಮಹಾನಗರ ‌ಪಾಲಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿದಾಗ ಎಮ್ಮೆಗಳು ಕೆರೆಯೊಳಗಿದ್ದವು. ತಂತಿ ಬೇಲಿ‌ ತುಂಡರಿಸಿ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಎಮ್ಮೆ ಮಾಲೀಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಎಮ್ಮೆ ಮಾಲೀಕರು ತಂತಿ ಬೇಲಿ ಕಟ್ ಮಾಡಿ ₹5 ಸಾವಿರ ರೂ. ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬ್ರಹ್ಮಪುರ‌ ಠಾಣೆಯಲ್ಲಿ ಐಪಿಸಿ ಕಲಂ 447, 427 ಅಡಿ ಪ್ರಕರಣ ದಾಖಲಿಸಲಾಗಿದೆ.

ನಿಷೇಧಿತ ಪ್ರದೇಶ- ಘೋಷಣೆ : ಶ್ರೀ ಶರಣಬಸವೇಶ್ವರ ಅಪ್ಪಾ ಕೆರೆಯ ಸುತ್ತಮುತ್ತಲೂ ಗ್ರೀಲ್‍ಗಳನ್ನು ಅಳವಡಿಸಿ, ಬೇಲಿ ಹಾಕಿ ಅಪಾಯಕಾರಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ದನ, ಎಮ್ಮೆ ಮೇಯಿಸುವವರು ಈ ಕೆರೆಯ ಸುತ್ತಮುತ್ತಲಿನ ಬೇಲಿ ದಾಟಿ ಅಕ್ರಮವಾಗಿ ಪ್ರವೇಶ ಮಾಡಬಾರದು. ಈ ಕುರಿತು ಸುತ್ತಮುತ್ತಲಿನ‌ ಬೇಲಿಗೆ‌ ನಿಷೇಧಿತ ಪ್ರದೇಶವೆಂದು‌ ನಾಮಫಲಕ ಅಳವಡಿಸಲಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆಗೆ ಸಕಲ ಸಿದ್ಧತೆ : ಅಫಜಲಪುರ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ಹಿಡಿದಿದ್ದ ಗ್ರಹಣ ಕೊನೆಗೂ ಮುಕ್ತಾಯಗೊಂಡಿದ್ದು ಕಳೆದ ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟ, ಸಂಚಾರ ದಟ್ಟಣೆ, ರಸ್ತೆ ಬದಿ ವಾಹನಗಳ ಪಾರ್ಕಿಂಗ್, ಇವೆಲ್ಲವುಗಳ ಮಧ್ಯೆ ರಸ್ತೆಗೆ ಹೊಂದಿಕೊಂಡಿರುವ ಗೂಡಂಗಡಿಗಳು, ಬಿಡಾಡಿ ದನಗಳ ದರ್ಬಾರ್, ರಸ್ತೆ ಮೇಲಿನ ಧೂಳು ಹೀಗೆ ಇವುಗಳಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ವ್ಯತಿರಿಕ್ತ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಸೌಂದರೀಕರಣಕ್ಕಾಗಿ 2022-23 ನೇ ಸಾಲಿನ ಅಮೃತ ನಗರೋತ್ಥಾನ ಹಂತ -4ರ ಯೋಜನೆ ಅಡಿಯಲ್ಲಿ ವಿವಿಧ ವಾರ್ಡ್​ಗಳಲ್ಲಿ ಮಂಜೂರಾದ ಸಿ.ಸಿ ರಸ್ತೆ, ಬಿ.ಟಿ ರಸ್ತೆ, ಚರಂಡಿ ಮತ್ತು ಸೆಂಟರ್ ಬೀದಿ ದೀಪಗಳು ಹಾಗೂ ಹೈಮಾಸ್ಟ್ ವಿದ್ಯುದೀಪ ಹೀಗೆ ಡಿವೈಡರ್ ಕಾಮಗಾರಿಗಳಿಗೆ ಸುಮಾರು 4 ಕೋಟಿ 35 ಲಕ್ಷ ರೂ. ಅನುದಾನ ಮಂಜೂರಾಗಿದೆ. ಈಗಾಗಲೇ ಶಾಸಕ ಎಂ.ವೈ ಪಾಟೀಲ್ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ನಾಳೆ ಶನಿವಾರ ಮುಂಜಾನೆ 8 ಗಂಟೆಗೆ ಮುಖ್ಯ ಹೆದ್ದಾರಿ ಮಧ್ಯ ಭಾಗದಿಂದ ಎಡ ಮತ್ತು ಬಲ ಭಾಗಕ್ಕೆ 50 ಅಡಿ(ಫೀಟ್) ಅಳತೆ ಮಾಡಿ ಅನಧೀಕೃತವಾಗಿ ಆಕ್ರಮಸಿಕೊಂಡಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಾಕೇದಾರ ಪೆಟ್ರೋಲ್ ಪಂಪಿನಿಂದ ತಹಸೀಲ್ ಕಚೇರಿಯವರೆಗೆ ಅಗಲೀಕರಣ ಕಾರ್ಯ ಆರಂಭವಾಗಲಿದ್ದು, ಕಾರ್ಯಾಚರಣೆಯಲ್ಲಿ ತಹಸೀಲ್ದಾರರು, ಪುರಸಭೆಯ ಮುಖ್ಯಾಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಭದ್ರತಾ ಪಡೆ, 50 ಜನ ಪೌರ ಕಾರ್ಮಿಕರು, 15 ಜನ ಪುರಸಭೆಯ ಸಿಬ್ಬಂದಿ ವರ್ಗ, 2 ಜೆಸಿಬಿ, 2 ಟ್ರ್ಯಾಕ್ಟರ್, 4 ಕಸ ತುಂಬುವ ವಾಹನ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿರಲಿದ್ದಾರೆ.

ಇದನ್ನೂ ಓದಿ : ಮಾಯದಂತ ಮಳೆ ಬಂತಣ್ಣಾ ಮದಗದ ಕೆರೆಗೆ..: ಹೊಲ-ಗದ್ದೆ, ತೋಟಗಳಿಗೆ ಚೈತನ್ಯ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.