ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರೆಸಿದ್ದು, ಇವತ್ತು ಒಂದೇ ದಿನದಲ್ಲಿ 16 ಜನರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಎಲ್ಲ ಸೋಂಕಿತರೂ ಮುಂಬೈಯಿಂದ ವಾಪಸ್ ಬಂದು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು. ಚಿತ್ತಾಪೂರ ತಾಲೂಕಿನ ಅರಣಕಲ್ ಬುಗಡಿ ತಾಂಡಾದ 8 ಜನ, ಅನಿಕೇರಿ ಬಳಿಯ ರಾಮಾನಾಯಕ ತಾಂಡಾದ ಇಬ್ಬರು, ಕಾಳಗಿ ತಾಲೂಕಿನ ಕೊರವಾರ ತಾಂಡಾದ ಇಬ್ಬರು, ಸೂಗೂರ ತಾಂಡಾದ ಓರ್ವ, ಅರಣಕಲ್ ತಾಂಡಾದಲ್ಲಿ ಒಬ್ಬ, ಅರಣಕಲ್ ಸೋಂಗಸು ತಾಂಡಾದಲ್ಲಿ ಒಂದು ಹಾಗೂ ಕಮಲಾಪೂರ ತಾಲೂಕಿನ ಡೋಂಗರಗಾಂವ ಭೀಮನಾಲ ತಾಂಡಾ ಓರ್ವ ಸೇರಿ ಒಟ್ಟು 16 ಜನರಿಗೆ ಸೋಂಕು ತಗುಲಿದೆ.
ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 42 ವರ್ಷದ ಪುರುಷ (P-2139),18 ವರ್ಷದ ಯುವಕ (P-2140) ಹಾಗೂ 35 ವರ್ಷದ ಮಹಿಳೆಗೆ (P-2151), ಕಮಲಾಪೂರ ತಾಲೂಕಿನ ಡೊಂಗರಗಾಂವ ಬಳಿಯ ಭೀಮನಾಳ ತಾಂಡಾದ 29 ವರ್ಷದ ಯುವಕ (P-2152),ಕಾಳಗಿ ತಾಲೂಕಿನ ಕೋರವಾರ ತಾಂಡಾದ 30 ವರ್ಷದ ಯುವಕ (P-2141),ಸುಗೂರ ಕೆ. ತಾಂಡಾದ 26 ವರ್ಷದ ಯುವಕ (P-2148), ಅರಣಕಲ್ ತಾಂಡಾದ 29 ವರ್ಷದ ಯುವತಿ (P-2149)ಹಾಗೂ ಅರಣಕಲ್ ಹತ್ತಿರದ ಸೊಂಗಸು ತಾಂಡಾದ 68 ವರ್ಷದ ವೃದ್ಧನಿಗೂ (P-2150)ಕೊರೊನಾ ಸೋಂಕು ಕಂಡುಬಂದಿದೆ.
ಇದಲ್ಲದೇ ಕಾಳಗಿ ತಾಲೂಕಿನ ಅರಣಕಲ್ ಹತ್ತಿರದ ಬುಗಡಿ ತಾಂಡಾದ 10 ವರ್ಷದ ಬಾಲಕ (P-2142),55 ವರ್ಷದ ಮಹಿಳೆ (P-2143),45 ವರ್ಷದ ಪುರುಷ (P-2144),18 ವರ್ಷದ ಯುವಕ (P-2145),40 ವರ್ಷದ ಪುರುಷ (P-2146), 15 ವರ್ಷದ ಬಾಲಕಿ (P-2147), 36 ವರ್ಷದ ಯುವಕ (P-2178) ಹಾಗೂ 21 ವರ್ಷದ ಯುವತಿಗೂ (P-2179) ಕೊರೊನಾ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. 72 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 7 ಜನರು ನಿಧನ ಹೊಂದಿದ್ದಾರೆ. ಉಳಿದಂತೆ 78 ಜನರಿಗೆ ಚಿಕಿತ್ಸೆ ಮುಂದುವರೆದಿದೆ.