ETV Bharat / state

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಎನ್. ಸತೀಶ ಕುಮಾರ ನೇಮಕ - ಎನ್. ಸತೀಶ ಕುಮಾರ ನೇಮಕ

ಕಲಬುರಗಿ ನಗರಕ್ಕೆ ನೂತನ ಪೊಲೀಸ್ ಆಯುಕ್ತರನ್ನು ನೇಮಿಸಲಾಗಿದೆ. ಐಪಿಎಸ್​ ಅಧಿಕಾರಿ ಎನ್​. ಸತೀಶ ಕುಮಾರ ಅವರನ್ನು ಕಲಬುರಗಿ ನಗರದ ಪೊಲೀಸ್​ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

new Police Commissioner for Kalaburagi
IPS N. Satish Kumar
author img

By

Published : Apr 2, 2020, 2:31 PM IST

ಕಲಬುರಗಿ: ಕಲಬುರಗಿ ನಗರ ನೂತನ ಪೊಲೀಸ್​ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎನ್. ಸತೀಶ ಕುಮಾರ ಅವರನ್ನು ನೇಮಕ ಮಾಡಿ ಕೆಎಸ್ಆರ್​ಪಿ ಎಡಿಜಿಪಿ ಆದೇಶ ಹೊರಡಿಸಿದ್ದಾರೆ. ಕಲಬುರಗಿಯ ಮೊದಲ ಪೊಲೀಸ್​ ಆಯುಕ್ತರಾಗಿ‌ ಸೇವೆ ಸಲ್ಲಿಸಿದ್ದ ಎಂ.ಎನ್. ನಾಗರಾಜ್ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ನೂತನ ಕಮಿಷನರ್ ಆಗಿ ಐಪಿಎಸ್ ಅಧಿಕಾರಿ ಎನ್. ಸತೀಶ ಕುಮಾರ ಅವರನ್ನು ಸರ್ಕಾರ ನಿಯೋಜಿಸಿದೆ.

ಸತೀಶ್ ಕುಮಾರ ಅವರು ಈ ಮುನ್ನ ಬೆಂಗಳೂರು ನಗರ ಕೆಎಸ್ಆರ್​ಪಿ ಡೆಪ್ಯೂಟಿ ಇನ್ಸಪೆಕ್ಟರ್​ ಜನರಲ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಲಬುರಗಿ ಡಿಐಜಿಪಿ ಹಾಗೂ ಪೊಲೀಸ್​ ಆಯುಕ್ತರಾಗಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗುವಂತೆ ಅವರಿಗೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.