ಕಲಬುರಗಿ : ರೈಲ್ವೆ ಹಳಿಯಲ್ಲಿ ನವಜಾತ ಗಂಡು ಶಿಶು ಬಿಸಾಡಿ ಹೋದ ಅಮಾನವೀಯ ಘಟನೆ ನಗರದ ರೈಲ್ವೆ ನಿಲ್ದಾಣ ಸಮೀಪದ ಕೋರಂಟಿ ಹನುಮಾನ ದೇವಸ್ಥಾನದ ಬಳಿ ನಡೆದಿದೆ.
ನವಜಾತ ಗಂಡು ಶಿಶುವಿನ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದು, ಶಿಶು ಜೀವಂತ ಇರುವಾಗಲೇ ರಾತ್ರಿ ವೇಳೆ ಪೋಷಕರು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಾಡಿ ಠಾಣೆಯ ಪಿಎಸ್ಐ ವೀರಭದ್ರ ಹೆಚ್, ಎಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಶಿಶು ನಿರ್ದಯವಾಗಿ ಬಿಸಾಡಿ ಹೋದವರ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
![kalaburgi district news](https://etvbharatimages.akamaized.net/etvbharat/prod-images/4658490_infant.jpg)
ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಕರಳನ್ನೂ ಕುಡಾ ಕತ್ತರಿಸದ ಕಂದಮ್ಮನನ್ನು ಬಿಸಾಡಿಹೋದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.