ಕಲಬುರಗಿ: ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿಯನ್ನು ಬಂಧಿಸುವ ವೇಳೆ ಕಾಂಪೌಂಡ್ ಜಿಗಿದು ಪರಾರಿಯಾದ ಘಟನೆ ಅಫಜಲಪುರ ಬಸ್ಸ್ಟ್ಯಾಂಡ್ ಬಳಿ ನಡೆದಿದೆ.
ಅಬ್ದುಲ್ ಖಾದರ್ ಪರಾರಿಯಾದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಚಲನ ವಲನಗಳಿಂದ ಅನುಮಾನಗೊಂಡು ವಿಚಾರಣೆ ಮಾಡಲು ಪೊಲೀಸರು ಮುಂದಾದಾಗ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಪರಾರಿಯಾಗುವಾಗ ಆತನ ಬಳಿ ಇದ್ದ ನಾಡ ಪಿಸ್ತೂಲ್ ಕೆಳಗೆ ಬಿದ್ದಿದೆ. ಸದ್ಯ 1 ಪಿಸ್ತೂಲ್, ಹಾಗೂ 1 ಜೀವಂತ ಗುಂಡನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತೆಲೆ ಮೆರೆಸಿಕೊಂಡ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.