ಕಲಬುರಗಿ : ಹೈದರಾಬಾದ್ ಕರ್ನಾಟಕಕ್ಕೆ ಏಮ್ಸ್ ಸೇರಿದಂತೆ ವಿವಿಧ ಅವಶ್ಯಕ ಯೋಜನೆಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ್ ಕಿಡಿಕಾರಿದ್ದಾರೆ.
ಈ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಸಿಎಂ ಬಿ ಎಸ್ಯಡಿಯೂರಪ್ಪನವರು ಘೋಷಿಸಿದಂತೆ ಏಮ್ಸ್ ಕಲಬುರಗಿಗೆ ತರದೇ, ಹುಬ್ಬಳ್ಳಿ-ಧಾರವಾಡಗೆ ಸ್ಥಳಾಂತರಿಸಲಾಗಿದೆ.
ಜೊತೆಗೆ ಕಲಬುರಗಿಗೆ ಇಕೋ ಫ್ರೆಂಡ್ಲಿ ಕೈಗಾರಿಕೆ ಸಹ ನೀಡದೇ ಅನ್ಯಾಯ ಮಾಡಲಾಗಿದೆ. ಬರೀ ಧೂಳು, ಹೊಗೆ ತರುವ ಸಿಮೆಂಟ್ ಮತ್ತು ಥರ್ಮಲ್ ವಿದ್ಯುತ್ ಯೋಜನೆಗಳನ್ನು ಇಲ್ಲಿ ಜಾರಿಗೆ ತರಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆ ಭರ್ತಿಗೆ ಸಮ್ಮತಿ : ಸಿಎಂಗೆ ಧನ್ಯವಾದ ಸಲ್ಲಿಸಿದ ಸುರೇಶ್ ಕುಮಾರ್
ಹೀಗಾಗಿ, ಮುಂಬರುವ ಬಜೆಟ್ನಲ್ಲಿ ಇಕೋ ಫ್ರೆಂಡ್ಲಿ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕು. ಸ್ವತಃ ಸಿಎಂ ಘೋಷಿಸಿದಂತೆ ಕಲಬುರಗಿಗೆ ಕೈ ತಪ್ಪಿರುವ ಏಮ್ಸ್ ಇಲ್ಲಿಯೇ ಸ್ಥಾಪಿಸಲು ಬಜೆಟ್ನಲ್ಲಿ ನಿರ್ಣಯ ಕೈಗೊಳ್ಳಬೇಕು. ಕಲಬುರಗಿ ರೈಲ್ವೆ ವಲಯ ಸ್ಥಾಪನೆಗೂ ರಾಜ್ಯದಿಂದ ಹಣ ನೀಡಬೇಕು.
ಸ್ಪೆಷಲ್ ಕಾರಿಡಾರ್ ಯೋಜನೆ ಸ್ಥಾಪನೆಗೂ ಬಜೆಟ್ನಲ್ಲಿ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಬಜೆಟ್ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಮರನಾಥ ಪಾಟೀಲ ಆಗ್ರಹಿಸಿದ್ದಾರೆ.