ಸೇಡಂ (ಕಲಬುರಗಿ): ಭಾರಿ ಮಳೆಯಿಂದ ಕಲಬುರಗಿಗೆ ಸಂಪರ್ಕ ಕಲ್ಪಿಸುವ ಮಳಖೇಡ ಗ್ರಾಮದ ಕಾಗಿಣಾ ನದಿ ಸೇತುವೆ ಮತ್ತೆ ಮುಳುಗಡೆಯಾಗಿದೆ. ಕಳೆದೆರಡು ದಿನದ ಹಿಂದೆಯಷ್ಟೇ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿತ್ತು. ಬಳಿಕ ಪ್ರವಾಹ ಇಳಿಮುಖವಾಗಿ ಸಂಚಾರಕ್ಕೆ ಮುಕ್ತವಾಗಿತ್ತು.
ಇದೀಗ ಮತ್ತೆ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಕಡಿತಗೊಂಡಿದೆ. ಈ ಹಿನ್ನೆಲೆ ಕಲಬುರಗಿಗೆ ತೆರಳಲು ಪರ್ಯಾಯವಾಗಿ ಶಹಾಬಾದ್ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಅಲ್ಲದೆ ತಾಲೂಕಿನ ಹೆಡ್ಡಳ್ಳಿ ತೆಲ್ಕೂರ ಮತ್ತು ಬಿಬ್ಬಳ್ಳಿ ಬ್ರಿಡ್ಜ್ ಸಹ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ನದಿ ಪಾತ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.