ETV Bharat / state

ಹೆಚ್​ ಡಿ ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ತೆರಳಿ ಕಾಲಿಗೆ ಬಿದ್ದು ಬಂದಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ

ನೀರಿನ ವಿಚಾರವಾಗಿ ದಯವಿಟ್ಟು ಯಾರೂ ರಾಜಕೀಯ ಮಾಡೋದಕ್ಕೆ ಹೋಗಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ
author img

By ETV Bharat Karnataka Team

Published : Sep 25, 2023, 3:48 PM IST

ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಬಿಜೆಪಿಯ ಎಲ್ಲಾ ಮುಖಂಡರಿಗೆ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಚಿಂಚೋಳಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದಾರೆ. ರಾಜ್ಯದ ಹಿತದೃಷ್ಠಿಯಿಂದಲ್ಲ, ಪ್ರಧಾನಿ ಬಳಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೋಗಿದ್ದಾರಾ? ಅಥವಾ ಅವರು ಕಾವೇರಿ ವಿಚಾರ ಚರ್ಚೆ ಮಾಡಿದ್ರಾ? ಎಂದು ಪ್ರಶ್ನಿಸಿದರು.

ಹೋಮ್​ ಮಿನಿಸ್ಟರ್​ ಹತ್ತಿರ ಹೋದ್ರು. ಜೆ ಪಿ ನಡ್ಡಾ ಅವರ ಹತ್ತಿರ ಹೋದ್ರು. ಅಲ್ಲಿ ಜೆಡಿಎಸ್​ ಬಗ್ಗೆ ಚರ್ಚೆ ಆಯ್ತ? ಅಥವಾ ಕರ್ನಾಟಕದ ಜನರ ಭವಿಷ್ಯದ ಬಗ್ಗೆಯೂ ಚರ್ಚೆ ಆಯ್ತ?. ಈಗ ಅವರೇ ಇದ್ದರಲ್ಲ ಅಧಿಕಾರದಲ್ಲಿ, ಡಬಲ್​ ಇಂಜಿನ್​ ಹೋಗಿ ತ್ರಿಬಲ್ ಇಂಜಿನ್ ಆಯ್ತಲ್ಲ? ಎಂದು ವಾಗ್ದಾಳಿ ನಡೆಸಿದರು.

ನೀರಿನ‌ ವಿಚಾರದಲ್ಲಿ ದಯವಿಟ್ಟು ಯಾರು ರಾಜಕೀಯ ಮಾಡೋದಕ್ಕೆ ಹೋಗಬೇಡಿ. ರೈತರ ಪರವಾಗಿ, ಕನ್ನಡಿಗರ ಪರವಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ. ಅದನ್ನು ನಾವು ಈಗಾಗಲೇ ದೃಢಪಡಿಸಿದ್ದೇವೆ. ಅನ್ಯಾಯ ಆಗ್ತಿದೆ ಅಂತಾ ಮೇಕೆದಾಟು ಯೋಜನೆ ಮಾಡ್ತಿದ್ದೇವೆ. ರೈತರಿಗಾಗಿಯೇ ಪಾದಯಾತ್ರೆ ಮಾಡಿರೋದು, ನಮ್ಮ ಸಲುವಾಗಿ ಅಲ್ಲ ಎಂದು ಸಚಿವ ಖರ್ಗೆ ಹೇಳಿದರು.

ನೀರು ಬಿಡದೆ ಇದ್ರು ಕೋರ್ಟ್ ಆದೇಶ ಉಲ್ಲಂಘನೆ ಆಗಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾವು ನೆಲದ ಕಾನೂನು ಪಾಲನೆ ಮಾಡಬೇಕಲ್ವಾ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೀರು ಬಿಟ್ಟಿರಲಿಲ್ವಾ? ಎಂದು ಪ್ರಶ್ನಿಸಿದರು. ಅನ್ಯಾಯವಾಗ್ತಿದೆ ಅಂತಲೇ ನಾವು ಮೇಕೆದಾಟು ಯೋಜನೆ ಮಾಡ್ತಿರೋದು. ಮೇಕೆದಾಟು ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್​ ಆದೇಶ ಏನಿದೆ?. ನಿಮ್ಮ ಪಾಲಿನ ನೀರು ಸಿಕ್ಕರೆ ನೀವು ಮೇಕೆದಾಟು ಯೋಜನೆ ಬಗ್ಗೆ ತಕರಾರು ಎತ್ತುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಮೊನ್ನೆ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಯಾರಿಗಾಗಿ ಮಾಡ್ತಿರೋದು?. ನಮ್ಮ ರಾಜ್ಯಕ್ಕೆ ಅಲ್ವಾ? ಈ ಯೋಜನೆಗೆ ಬಿಜೆಪಿಯವರು ವಿರುದ್ಧ ಇದ್ದರಲ್ವಾ?. ಮೇಕೆದಾಟು ಯೋಜನೆಗೋಸ್ಕರ ಪಾದಯಾತ್ರೆ ಯಾರು ಮಾಡಿದ್ದು? ನಾವಾ? ಅಥವಾ ಅವರಾ? ಎಂದು ಪ್ರಶ್ನಿಸಿದರು. ಇದಕ್ಕೆ ಸುಪ್ರೀಂಕೋರ್ಟ್​ನಲ್ಲಿ ಸ್ಟೇಟ್​ಮೆಂಟ್​ ಕೊಟ್ಟಿದ್ದರಲ್ಲ, ಇದಕ್ಕೆ ತಕರಾರು ಮಾಡುವಂತಿಲ್ಲ ಎಂದು. ಅವರ ಪಾಲು ಏನಿದೆ ಅವರಿಗೆ ಹೋಗಬೇಕಾಗುತ್ತೆ. ಸಮುದ್ರಕ್ಕೆ ಹೋಗುವ ಹೆಚ್ಚಿನ ನೀರನ್ನು ಕರ್ನಾಟಕದವರು ಇಟ್ಟುಕೊಂಡು ಬಳಕೆ ಮಾಡಿಕೊಳ್ಳಬಹುದು. ಯೋಜನೆ ರೂಪಿಸಬಹುದು ಎಂದಿದೆ. ರಾಜ್ಯ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಜವಾಬ್ದಾರಿಯನ್ನು ನಾವು ನಿರ್ವಹಿಸುತ್ತಿದ್ದೇವೆ. ಬಂದ್​ನಿಂದ ಆರ್ಥಿಕ ಹೊರೆ ಬೀಳುತ್ತದೆ ಅಂತ ಹೇಳಿದ್ದೇವೆ ಎಂದರು.

ಚಿಂಚೋಳಿ ಜನಸ್ಪಂದನ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ನಾವು ಜನರಿಗೆ ಮಾತು ಕೊಟ್ಟಿದ್ದೇವೆ. ಅದರ ಪ್ರಕಾರ ನಡೆದುಕೊಳ್ಳಬೇಕು ಅಷ್ಟೇ. ಇದರಲ್ಲಿ ರಾಜಕೀಯ ಏನಿದೆ?. ಈಗ ಚಿಂಚೋಳಿ ಅಭಿವೃದ್ಧಿ ಬೇಡ ಅಂತೀರಾ?. ಬಿಜೆಪಿ ಇದ್ದಾಗ ಇಷ್ಟೆಲ್ಲಾ ಅಭಿವೃದ್ಧಿ ಆಗಿತ್ತಾ?. ಅವರ ಆಡಳಿತದ ವೇಳೆ ಜನಸ್ಪಂದನ ಇತ್ತ?. ಅವರದ್ದು ಸರ್ಕಾರ ಇತ್ತಲ್ಲಾ? ಅವರಲ್ಲಿಯೂ ಶಾಸಕರಿದ್ದರು. ಜನಸ್ಪಂದನ ಆ ಸರ್ಕಾರದಲ್ಲೂ ಮಾಡಬಹುದಾಗಿತ್ತು. ಡಬಲ್​ ಇಂಜಿನ್​ ಎಂದು ಹೇಳುತ್ತಿದ್ದರಲ್ಲ. ನಾವೀಗ ಸಿಂಗಲ್ ಇಂಜಿನ್​ನಲ್ಲೇ ಸರ್ಕಾರ ನಡೆಸುತ್ತಿದ್ದೆವಲ್ಲಾ ಎಂದರು.

ಇದನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ, ಜೆಡಿಎಸ್​​ ರಾಜಕೀಯ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.