ಕಲಬುರಗಿ: ಮಹಾನಗರ ಪಾಲಿಕೆಯು ನೈರ್ಮಲ್ಯೀಕರಣ ವಿಭಾಗದಲ್ಲಿ ಪ್ರಸ್ತುತಪಡಿಸಿದ ಇಂಪ್ಲಿಮೆಂಟೇಷನ್ ಆಫ್ ಮೈಕ್ರೋ ಪ್ಲಾನ್ಸ್ ಫಾರ್ ಸ್ಯಾನಿಟೇಷನ್ ನಾಮಾಂಕಿತ ಯೋಜನೆಗೆ ಸ್ವರ್ಣ ಪ್ರಶಸ್ತಿ ಲಭಿಸಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಷ್ಟ್ರೀಯ ಮಟ್ಟದ ಸ್ಕಾಚ್-ಆರ್ಡರ್-ಆಫ್ ಮೆರಿಟ್ ಇಂಪ್ಲಿಮೆಂಟೇಷನ್ ಆಫ್ ಮೈಕ್ರೋ ಪ್ಲಾನ್ಸ್ ಫಾರ್ ಸ್ಯಾನಿಟೇಷನ್ ಯೋಜನೆಗೆ ಸ್ವರ್ಣಪ್ರಶಸ್ತಿ ದೊರೆತಿದೆ. ಇದು ನಗರದ ಜನರ ಹಿರಿಮೆ ಹೆಚ್ಚಿಸಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಅವರು ಹರ್ಷ ವ್ಯಕ್ತಪಡಿಸಿದರು.
ಆಡಳಿತದಲ್ಲಿ ಶ್ರೇಷ್ಠ ಸುಧಾರಣೆಗೆ ಖಾಸಗಿ ಸಂಸ್ಥೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದಿಂದ 33 ವಿವಿಧ ವಿಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳು ನಾಮಾಂಕಿತಗೊಂಡಿದ್ದವು. ಅದರಂತೆ ಕಲಬುರಗಿ ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತೆ ಬಿ.ಫೌಜಿಯಾ ತರನ್ನುಮ್ ಅವರು ಇಂಪ್ಲಿಮೆಂಟೇಷನ್ ಆಫ್ ಮೈಕ್ರೋ ಪ್ಲಾನ್ಸ್ ಫಾರ್ ಸ್ಯಾನಿಟೇಷನ್, ರಿಜುವಿನೇಷನ್ ಆಫ್ ಓಪನ್ ವೆಲ್ಸ್ ಆ್ಯಂಡ್ ಗ್ರೌಂಡ್ ವಾಟರ್ ಇನ್ ಕಲಬುರಗಿ ಸಿಟಿ ಆ್ಯಂಡ್ ಎಲೆಕ್ಟ್ರಾನಿಕ್ ಡಾಟಾ ಕ್ಯಾಪ್ಚರ್ (ಇಡಿಸಿ) ಗಳ ಪ್ರಶಸ್ತಿಗಳಿಗೆ ಕಲಬುರಗಿ ಪಾಲಿಕೆಯನ್ನು ನಾಮಾಂಕಿತಗೊಳಿಸಿದ್ದರು.
ಇಂಪ್ಲಿಮೆಂಟೇಷನ್ ಆಫ್ ಮೈಕ್ರೋ ಪ್ಲಾನ್ಸ್ ಫಾರ್ ಸ್ಯಾನಿಟೇಷನ್‍ಗೆ ಸ್ಕಾಚ್ ಗೋಲ್ಡ್ ಪ್ರಶಸ್ತಿ ಲಭಿಸಿದರೆ, ಇನ್ನೆರಡು ಪ್ರತ್ಯೇಕ ವಿಭಾಗದಲ್ಲಿ ನಾಮಾಂಕಿತಗೊಂಡಿರುವ ರಿಜುವಿನೇಷನ್ ಆಫ್ ಓಪನ್ ವೆಲ್ಸ್ ಆ್ಯಂಡ್ ಗ್ರೌಂಡ್ ವಾಟರ್ ಇನ್ ಕಲಬುರಗಿ ಸಿಟಿ ಎಲೆಕ್ಟ್ರಾನಿಕ್ ಡಾಟಾ ಕ್ಯಾಪ್ಚರ್ (ಇಡಿಸಿ) ಸಹ ಪ್ರಶಸ್ತಿಗಳಿಗೆ ಸೆಮಿಫೈನಲ್ವರೆಗೂ ತಲುಪಿವೆ ಎಂದು ರಾಹುಲ್ ಪಾಂಡ್ವೆ ವಿವರಿಸಿದರು.
ನೈರ್ಮಲ್ಯೀಕರಣ ವಿಭಾಗದಲ್ಲಿ ಕಲಬುರಗಿ ಪಾಲಿಕೆಗೆ ಸ್ಕಾಚ್-ಆರ್ಡರ್-ಆಫ್ ಮೆರಿಟ್ ಪ್ರಶಸ್ತಿ ಬರಲು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಅವರ ನಿರಂತರ ಮಾರ್ಗದರ್ಶನ ಹಾಗೂ ಪಾಲಿಕೆಯ ಹಿಂದಿನ ಆಯುಕ್ತೆ ಬಿ.ಫೌಜಿಯಾ ತರನ್ನುಮ್ ಅವರ ಪರಿಶ್ರಮ ಕಾರಣವಾಗಿದೆ. ಪಾಲಿಕೆಯ ಅಧಿಕಾರಿ-ಸಿಬ್ಬಂದಿ ಸೇರಿದಂತೆ ಪ್ರಶಸ್ತಿ ಲಭಿಸಲು ಕಾರಣಿಕರ್ತರಾದ ನಗರದ ಮಹಾಜನತೆಗೆ ಈ ಸಂದರ್ಭದಲ್ಲಿ ಆಯುಕ್ತ ರಾಹುಲ್ ತುಕಾರಾಮ್ ಪಾಂಡ್ವೆ ಅಭಿನಂದನೆ ಸಲ್ಲಿಸಿದ್ದಾರೆ.