ETV Bharat / state

ಕಲಬುರಗಿಯಲ್ಲಿ ಗಂಧದ ಗುಡಿ ಭರ್ಜರಿ ಓಪನಿಂಗ್: 3 ದಿನದ ಟಿಕೆಟ್​ ಸೋಲ್ಡೌಟ್! - ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನಸಿನ‌ ಚಿತ್ರ

ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆರೆಯ ಮೇಲೆ ನೆಚ್ಚಿನ ನಟನ ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.

ಗಂಧದ ಗುಡಿ
ಗಂಧದ ಗುಡಿ
author img

By

Published : Oct 28, 2022, 3:31 PM IST

ಕಲಬುರಗಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನಸಿನ‌ ಚಿತ್ರ ಗಂಧದ ಗುಡಿ ವಿಶ್ವದಾದ್ಯಂತ ಇಂದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹಾಗೆಯೇ ಕಲಬುರಗಿಯಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಳ್ಳಿ ಪರದೆಯ ಮೇಲೆ ನೆಚ್ಚಿನ ನಾಯಕನನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.

ನಗರದ ಸಂಗಮ್ಮ ಟಾಕೀಜ್ ಸೇರಿ ನಾಲ್ಕು ಕಡೆಗಳಲ್ಲಿ ಚಿತ್ರ ಪ್ರದರ್ಶನ ಆಗುತ್ತಿದ್ದು, ಎಲ್ಲೆಡೆ ಹೌಸ್​ ಫುಲ್ ಬೋರ್ಡ್​ಗಳು ಕಾಣಿಸುತ್ತಿವೆ. ಕೆಲವೆಡೆ ಈಗಾಗಲೇ ಮೂರು ದಿನಗಳ ಟಿಕೆಟ್​​ಗಳು ಬಹುತೇಕ ಸೋಲ್ಡೌಟ್ ಆಗಿವೆ.

ಸಂಗಮ್ಮ ಥಿಯೇಟರ್​ನಲ್ಲಿ ಅಪ್ಪು ಭಾವಚಿತ್ರವುಳ್ಳ ಪ್ಲೆಕ್ಸ್​​ಗೆ ಅಭಿಮಾನಿಗಳು ಹಾಲು ಸುರಿದು, ಸಂಭ್ರಮಿಸಿದರು. ಸಿನಿಮಾ ನೋಡಿದ ಅಭಿಮಾನಿಗಳು, ಭಾವುಕರಾಗಿ ಕಣ್ಣೀರು ಹಾಕಿರುವುದು ಕಂಡುಬಂತು.

ಇದನ್ನೂಓದಿ: ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದ ಗಂಧದ ಗುಡಿ.. ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.