ETV Bharat / state

ಕಲಬುರಗಿ: ಜಿಲ್ಲಾ ಕಾಂಗ್ರೆಸ್​​ನಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭ

author img

By

Published : May 9, 2021, 9:51 AM IST

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತವಾಗಿ ಎರಡು ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.

ಜಿಲ್ಲಾ ಕಾಂಗ್ರೆಸ್​​ನಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭ

ಕಲಬುರಗಿ: ಕೊರೊನಾ ರೋಗಿಗಳಿಗೆ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಹಾಮಾರಿಯಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ನೇರವೇರಿಸಲು ಜಿಲ್ಲಾ ಕಾಂಗ್ರೆಸ್, ಆರೋಗ್ಯ ಹಸ್ತ ಅಭಿಯಾನದಡಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.

ಬಳಿಕ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್ ಬೆಡ್ ಕೊರತೆಯಿಂದಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಪರದಾಡುವಂತ ಪರಿಸ್ಥಿತಿ ಇದೆ. ಸೋಂಕಿತರು ಮೃತಪಟ್ಟರೆ ಶವ ಸಾಗಿಸಲು ವಾಹನಗಳ ಕೊರತೆಯೂ ಇದೆ. ಹೀಗಾಗಿ ಆಂಬುಲೆನ್ಸ್ ಸಮಸ್ಯೆ ನೀಗಿಸಲು ಹಾಗೂ ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಒಟ್ಟು ಐದು ಆಂಬುಲೆನ್ಸ್ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದ್ದೇವೆ. ಸದ್ಯ ಎರಡಕ್ಕೆ ಚಾಲನೆ ನೀಡಲಾಗಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಮೂರು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಆಂಬುಲೆನ್ಸ್ ಅವಶ್ಯಕತೆ ಇರುವ ಸಾರ್ವಜನಿಕರು 6362943441 ಸಂಖ್ಯೆಗೆ ಕರೆ ಮಾಡಿದರೆ ಉಚಿತ ಸೇವೆ ಕಲ್ಪಿಸಲಾಗುವುದು ಎಂದು ತಿಳಿಸಿದರು‌.

ಇದನ್ನೂ ಓದಿ : ಶೇ.100 ರಷ್ಟು ರೋಗಿಗಳು ಗುಣಮುಖ: ದೇಶಕ್ಕೆ ಮಾದರಿ ಸೂರತ್​ನ ಐಸೋಲೇಶನ್​​ ಕೇಂದ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.