ಕಲಬುರಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು, ನಾಮಪತ್ರಗಳ ಪರಿಶೀಲನೆ ನಡೆದು ಐವರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಅಕ್ಟೋಬರ್ 28ರಂದು ನಡೆಯುವ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನಾ ಕಾರ್ಯ ಶುಕ್ರವಾರ ನಡೆದಿದ್ದು, ಒಟ್ಟು ಐದು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 3 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕತಗೊಂಡಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ಅವರು ತಿಳಿಸಿದ್ದಾರೆ.
ಜನತಾದಳ (ಜಾತ್ಯಾತೀತ) ಪಕ್ಷದಿಂದ ತಿಮ್ಮಯ್ಯ ಪುರ್ಲೆ, ಕಾಂಗ್ರೆಸ್ ಪಕ್ಷದಿಂದ ಶರಣಪ್ಪ ಮಟ್ಟೂರು, ಭಾರತೀಯ ಜನತಾ ಪಕ್ಷದಿಂದ ಶಶೀಲ ನಮೋಶಿ, ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಕಾಂತ ಸಿಂಗೆ ಅವರುಗಳ ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.
ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಅಕ್ಟೋಬರ್ 8ರ ಅಂತ್ಯಕ್ಕೆ ಒಟ್ಟು 8 ಅಭ್ಯರ್ಥಿಗಳಿಂದ 16 ನಾಮತ್ರಗಳು ಸಲ್ಲಿಕೆಯಾಗಿದ್ದವು.