ETV Bharat / state

ಅಪಘಾತವೆಸಗಿ ವ್ಯಕ್ತಿಯ ಸಾವಿಗೆ ಕಾರಣವಾದ ಪಿಡಿಒ ವಿರುದ್ಧ ಕ್ರಮಕೈ ಆಗ್ರಹಿಸಿ ಪ್ರತಿಭಟನೆ - kalburgi news

ದಶರಥ ಪಾತ್ರೆ ಅನ್ನೋ ಅಧಿಕಾರಿ ತಮ್ಮ ವಾಹನವನ್ನು ಡಿಕ್ಕಿ ಮಾಡಿ ವ್ಯಕ್ತಿಯ ಸಾವಿಗೆ ಕಾರಣರಾದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇಲ್ಲಿಯವರೆಗೆ ಬಂಧನವಾಗಿಲ್ಲ..

farmers-association
ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ
author img

By

Published : Jun 16, 2020, 8:50 PM IST

ಕಲಬುರ್ಗಿ : ತಮ್ಮ ವಾಹನದಲ್ಲಿ ಅಪಘಾತವೆಸಗಿ ಗ್ರಾಮಸ್ಥನ ಸಾವಿಗೆ ಕಾರಣರಾದ ಹಲೋ ಹೋಬಳಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡ ಮಾರುತಿ ಮಾನ್ಪಡೆ, ಮೌಲಾ ಮುಲ್ಲಾ, ಭೀಮಶಂಕರ್ ಮಾಡಿಯಾಳ, ಶರಣಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಢಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಶರಥ ಪಾತ್ರೆ ಅನ್ನೋ ಅಧಿಕಾರಿ ತಮ್ಮ ವಾಹನವನ್ನು ಡಿಕ್ಕಿ ಮಾಡಿ ವ್ಯಕ್ತಿಯ ಸಾವಿಗೆ ಕಾರಣರಾದ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇಲ್ಲಿಯವರೆಗೆ ಬಂಧನವಾಗಿಲ್ಲ.

ಅಖಿಲ ಭಾರತ ಕಿಸಾನ್‌ ಸಭಾ ಪ್ರತಿಭಟನೆ

ಈ ಹಿಂದೆಯೂ ಹಲವು ಗ್ರಾಮ ಪಂಚಾಯತ್​ಗಳಲ್ಲಿ ಕಾರ್ಯನಿರ್ವಹಿಸುವಾಗ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಸದಾ ಗುಂಡಾವರ್ತನೆ ತೋರಿ ದರ್ಪ ಮೆರೆಯುತ್ತಿರುವ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ವಜಾ ಮಾಡಿ ಬಂಧಿಸುವಂತೆ ಮುಖಂಡ ಮಾರುತಿ ಮಾನ್ಪಡೆ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.