ಕಲಬುರಗಿ: ಮೂರು ದಿನದ ಗಂಡು ಮಗುವಿನ ಹೃದಯದಲ್ಲಿ ರಂದ್ರ ಕಾಣಿಸಿಕೊಂಡ ಪರಿಣಾಮ ಮಗು ಸಾವು, ಬದುಕಿನ ಮದ್ಯೆ ಹೋರಾಡುತ್ತಿದೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯುವಂತೆ ವೈದ್ಯರು ಸೂಚಿಸಿದ್ದು, ಆ್ಯಂಬುಲೆನ್ಸ್‌ಗೆ ಪಾವತಿಸಲೂ ಸಹ ಹಣವಿಲ್ಲದೇ ಪೋಷಕರು ಪರದಾಡುತ್ತಿದ್ದಾರೆ.
ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ದಂಪತಿಯ 3 ದಿನದ ಮಗುವಿಗೆ ಹೃದಯದಲ್ಲಿ ರಂದ್ರ ಇರುವ ಬಗ್ಗೆ ಕಲಬುರಗಿ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ಮಗುವನ್ನು ಕರೆದ್ಯೊಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಆ್ಯಂಬುಲೆನ್ಸ್ ಮೂಲಕ ಮಗುವನ್ನು ಬೆಂಗಳೂರಿಗೆ ಕರೆದೊಯ್ಯಲು ಬಡ ಕುಟುಂಬ ಪರದಾಡುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್ ಸೇವೆ ನಿರಾಕರಿಸುತ್ತಿದ್ದಾರೆ. ಖಾಸಗಿ ಆ್ಯಂಬುಲೆನ್ಸ್ನಲ್ಲಿ ಕರೆದ್ಯೊಯಲು 25 ಸಾವಿರ ರೂಪಾಯಿ ಹಣ ಬೇಕು, ನಮ್ಮ ಬಳಿ ಹಣ ಇಲ್ಲ ಎಂದು ಬಡ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವು ತಕ್ಷಣ ಕ್ರಮ ವಹಿಸಿ ಮಗುವನ್ನು ಚಿಕಿತ್ಸೆಗೆ ರವಾನೆ ಹಾಗೂ ಚಿಕಿತ್ಸೆ ಖರ್ಚು ಭರಿಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಮಗು ನೋಡಲು ಬಯಸುವ ವಿಚ್ಛೇದಿತ ಪತಿಗೆ ಆತಿಥ್ಯ ನೀಡುವ ಅವಶ್ಯಕತೆ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು