ETV Bharat / state

ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ ಸಿಎಂ ಅಭ್ಯರ್ಥಿ.. ಬಿಜೆಪಿ ಸರ್ಕಾರ ಕಿತ್ತಾಕುವದೇ ನಮ್ಮ ಆದ್ಯತೆ: ಸುರ್ಜೇವಾಲ - ಬಿಜೆಪಿ ಸರ್ಕಾರ

ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಸವರಾಜ ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್ ಸರ್ಕಾರವನ್ನು ಕಿತ್ತು ಹಾಕೋದು ನಮ್ಮ ಆದ್ಯತೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

every-congress-worker-is-a-cm-candidate-says-randeep-singh-surjewala
ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ ಸಿಎಂ ಅಭ್ಯರ್ಥಿ.. ಬಿಜೆಪಿ ಸರ್ಕಾರ ಕಿತ್ತು ಹಾಕುವದೇ ನಮ್ಮ ಆದ್ಯತೆ: ಸುರ್ಜೇವಾಲ
author img

By

Published : Dec 1, 2022, 6:37 PM IST

ಕಲಬುರಗಿ: ರಾಜ್ಯದಲ್ಲಿರುವ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಸಿಎಂ‌ ಅಭ್ಯರ್ಥಿಯಾಗಿದ್ದಾರೆ. ಮೊದಲು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಸವರಾಜ ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್ ಸರ್ಕಾರವನ್ನು ಕಿತ್ತು ಹಾಕೋದು ನಮ್ಮ ಆದ್ಯತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ನಗರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿದರು. ಈ ವೇಳೆ ಸಿಎಂ ಹುದ್ದೆ ಕಿತ್ತಾಟ ಕುರಿತಾದ ಪ್ರಶ್ನೆ‌ಗೆ ಉತ್ತರಿಸಿದ ಸುರ್ಜೇವಾಲ, ಸಿಎಂ ಹುದ್ದೆಗೆ ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿಯಾಗಿದ್ದಾರೆ. ಮೊದಲು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಕಿತ್ತಾಕೋದು ನಮ್ಮ ಗುರಿಯಾಗಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ: ಹೆಚ್ ಡಿ ದೇವೇಗೌಡ

ಬೊಮ್ಮಾಯಿ ಸರ್ಕಾರ ನಡೆಸುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಬರಬೇಕಿದ್ದ ಉದ್ಯಮಗಳು ಬೇರೆ ರಾಜ್ಯದತ್ತ ಮುಖಮಾಡಿವೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಎಡಿಜಿಪಿ ಹಂತದ ಅಧಿಕಾರಿಯೇ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಜೈಲಿಗೆ ಹೋಗಿದ್ದಾರೆ. ರಾಜ್ಯದ ಯುವಜನರ ಕೈಗೆ ಕೆಲಸವಿಲ್ಲ ಎಂದು ಟೀಕಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಬಡವರ ಮೇಲೆ ಪ್ರಹಾರ ಮಾಡಿದೆ. ಉದ್ಯೋಗ ಸೃಷ್ಟಿಸದೆ ಯುವಕರನ್ನು ವಂಚಿಸಿದೆ. ದಿನಪಯೋಗಿ ವಸ್ತುಗಳ ಬೆಲೆ ಗಗಣಕ್ಕೇರಿಸಿ ಮಹಿಳೆಯರ ಮೇಲೆ‌ ಪ್ರಹಾರ ಮಾಡಿದೆ. ಮಕ್ಕಳ ಶಿಕ್ಷಣಕ್ಕೆ ಅನಕೂಲವಾಗಲು ನೀಡುತ್ತಿದ್ದ ಸ್ಕಾಲರ್​ಶಿಪ್​ ರದ್ದು ಮಾಡಿ ಅನ್ಯಾಯ ಮಾಡಿದೆ. ಸಂವಿಧಾನದ ಆಶಯಗಳ ವಿರುದ್ಧ ನಡೆಯುವ ಮೋದಿ ಸರ್ಕಾರವನ್ನು ಕಿತ್ತು ಹಾಕುವ ಕೆಲಸಕ್ಕೆ ಜನ ಮುಂದಾಗಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.

ಇದನ್ನೂ ಓದಿ: ಗಡಿ ವಿವಾದದಲ್ಲಿ ಸರ್ಕಾರ ರಾತ್ರಿ ರಾಜಕಾರಣ ಮಾಡೋದು ಬಿಡಲಿ: ಡಿ ಕೆ ಶಿವಕುಮಾರ್​

ಕಲ್ಯಾಣ ಕರ್ನಾಟಕದ ಭಾಗದಿಂದ ಕಡಿಮೆ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ‌ ಮಾಡಲಾಗಿದೆ ಎಂದು ಈ ಭಾಗದ ಮೇಲೆ ಬೊಮ್ಮಾಯಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಜಾರಿ ವಿಷಯದಲ್ಲಿ ಮೊದಲಿನಿಂದಲೂ ಬಿಜೆಪಿ ವಿರೋಧ ಮಾಡಿದೆ. ಆದರೆ, ಕಾಂಗ್ರೆಸ್ 371 (ಜೆ) ಜಾರಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಭಾಗದ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಟ್ಟಿದೆ. ಜನರ ಜೀವನದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ಅವರು ಎಷ್ಟೇ ಆಟ ಆಡಿದರೂ, ಕಾಂಗ್ರೆಸ್ ಜನರ ಜೀವನ ರೂಪಿಸುವ ಕೆಲಸ‌ ಮಾಡುತ್ತದೆ. ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮುಸ್ಲಿಂ ಮಹಿಳಾ ಕಾಲೇಜು ಪ್ರಾರಂಭಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.