ETV Bharat / state

ಮೈದುಂಬಿ‌‌ ಹರಿಯುತ್ತಿರುವ ಎತ್ತಿಪೋತಾ ಜಲಪಾತ...

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಎತ್ತಿಪೋತಾ ಜಲಪಾತ ಮೈದುಂಬಿ‌ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Ettipota waterfall
ಮೈದುಂಬಿ‌‌ ಹರಿಯುತ್ತಿರುವ ಎತ್ತಿಪೋತಾ ಜಲಪಾತ...
author img

By

Published : Aug 2, 2023, 11:11 PM IST

ಮೈದುಂಬಿ‌‌ ಹರಿಯುತ್ತಿರುವ ಎತ್ತಿಪೋತಾ ಜಲಪಾತ...

ಕಲಬುರಗಿ: ಬಿಸಿಲಿನ ತಾಪಕ್ಕೆ ಹೆಸರುವಾಸಿಯಾದ ಕಲಬುರಗಿ ಜಿಲ್ಲೆ ಈಗ‌ ಅಕ್ಷರಶಃ ಮಲೆ‌ನಾಡಿನ ವಾತಾವರಣದಂತೆ ಭಾಸವಾಗುತ್ತಿದೆ. ಕಳೆದೊಂದು ವಾರದಿಂದ‌ ಅಬ್ಬರದ ಮಳೆಯಾಗಿದೆ. ಜೊತೆಗೆ ಮಹಾರಾಷ್ಟ್ರ, ತೆಲಂಗಾಣದಲ್ಲಿ ಸುರಿದಿದ್ದ ಭಾರಿ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ತಂಪಿನ ವಾತಾವರಣ ಕಂಡುಬರುತ್ತಿದೆ. ಚಿಂಚೋಳಿ ತಾಲೂಕಿನ‌ ಎತ್ತಿಪೋತಾ ಜಲಪಾತ ಮೈದುಂಬಿ‌‌ ಹರಿಯುತ್ತಿದೆ. ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಚಿಕ್ಕಪುಟ್ಟ ಜಲಪಾತಗಳು ಇವೆ. ಬೆಸಿಗೆಯಲ್ಲಿ ಇವು‌ ಸೊರಗಿ ಹೋಗುತ್ತವೆ. ಮಳೆಗಾಲದಲ್ಲಿ ಈ ಭಾಗದ ಕೆಲವೊಂದು ಜಲಪಾತಗಳು ಕಣ್ಮನ ಸೆಳೆಯುತ್ತವೆ. ಇವುಗಳ‌ ಪಟ್ಟಿಯಲ್ಲಿರುವ ಚಂದ್ರಂಪಳ್ಳಿ ಡ್ಯಾಮ್ ಸಮೀಪದ ಎತ್ತಿಪೋತಾ ಜಲಪಾತ ಮೈದುಂಬಿ‌ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಜಲಪಾತಗಳ ಸುಂದರ ದೃಶ್ಯಗಳನ್ನು ವೀಕ್ಷಿಸಲು ಮಲೆನಾಡಿಗೆ ಹೋಗುತ್ತಿದ್ದ ಜನರು, ಸದ್ಯ ತಮ್ಮ ಊರಿನಲ್ಲಿಯೇ ಭೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಲಬುರಗಿಯಿಂದ 125 ಕಿ.ಮೀ. ದೂರದಲ್ಲಿದೆ ಎತ್ತಿಪೋತಾ ಜಲಪಾತ: ಚಿಂಚೋಳಿ ತಾಲೂಕಿನಲ್ಲಿರುವ ಎತ್ತಿಪೋತಾ ಜಲಪಾತವು, ಜಿಲ್ಲಾ ಕೇಂದ್ರ ಕಲಬುರಗಿಯಿಂದ 125 ಕಿ.ಮೀ. ದೂರದಲ್ಲಿದೆ. ಚಿಂಚೋಳಿ ತಾಲೂಕಿನ ಕುಂಚಾವರಂನಿಂದ 10 ಕಿ.ಮೀ. ದೂರದಲ್ಲಿದೆ. ಗೋಪುನಾಯಕ ತಾಂಡಾ- ಸಂಗಾಪುರ ರಸ್ತೆಯಲ್ಲಿಯೇ ಇದು ಕಂಡುಬರುತ್ತದೆ. ತೆಲಂಗಾಣದಿಂದ ಹರಿದ ನೀರಿನಿಂದ ಕರ್ನಾಟಕ - ತೆಲಂಗಾಣ ಗಡಿಯಲ್ಲಿ ಎತ್ತಿಪೋತ ಜಲಪಾತ ಮೈದಳೆಯುತ್ತದೆ. ತೆಲುಗಿನಲ್ಲಿ ಎತ್ತಿಪೋತ ಎಂದರೆ ಮೇಲಿಂದ ಕೆಳಗೆ ಬೀಳುವುದು ಎನ್ನಲಾಗುತ್ತದೆ. ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಎತ್ತಿಪೋತಾ ಜಲಪಾತಕ್ಕೆ ಮುಂಗಾರು ಮಳೆಯಿಂದ ಜೀವಕಳೆ ಬಂದಿದೆ. ಕರಿ ಕಲ್ಲಿನಲ್ಲಿ ಕೆಂಪು ನೀರು ಎತ್ತರದಿಂದ ಬೀಳುವ ದೃಶ್ಯ ರಮ್ಯವಾಗಿದೆ.

ಕೊಚಾವರಂ ವನ್ಯಜೀವಿ ಧಾಮ ಹಸಿರುಮಯ: ಕೊಚಾವರಂ ವನ್ಯಜೀವಿ ಧಾಮ ಕೂಡಾ ಹಚ್ಚ ಹಸಿರು ಸಿರೆಯುಟ್ಟು ಮಧುಮಗಳಂತೆ ಕಂಗೋಳಿಸುತ್ತಿದೆ. ಕಣ್ಣು ಹಾಯಿಸಿದ ಕಡೆಯೆಲೆಲ್ಲಾ ಹಸಿರು ಪಸರಿಸಿಕೊಂಡಿದೆ. ಹಸಿರು ಅರಣ್ಯ ಮಧ್ಯೆ, ಪುಟ್ಟ ಜಲಪಾತಗಳ ಜುಳುಜುಳ ನಿನಾದ, ಪಕ್ಷಿ‌ ಪ್ರಾಣಿಗಳ ಖುಷಿಯಾದ ಶಬ್ದದ ನಾದ ಕಿವಿಗೆ ಇಂಪು ನೀಡುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರ ಮಾರ್ಗದರ್ಶನ ಸಹಾಯ ಪಡೆದು, ಎತ್ತಿಪೋತ ಜಲಪಾತಕ್ಕೆ ಹೋಗಿ ಬರಬಹುದಾಗಿದೆ. ಇದೀಗ ಎತ್ತಿಪೋತ ಜಲಾಶಯ, ಕುಂಚಾವರಂ ಅಭಯಾರಣ್ಯ, ಚಂದ್ರಪಳ್ಳಿ ಜಲಾಶಯಗಳನ್ನು ನೋಡಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ದಿನದ ಪ್ರವಾಸಕ್ಕಾಗಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಕೇವಲ‌ ಕಲಬುರಗಿ, ಬೀದರ್ ಜಿಲ್ಲೆಯಲ್ಲದೆ ರಾಜ್ಯದ ಇತರೆ ಜಿಲ್ಲೆಗಳು, ಪಕ್ಕದ ತೆಲಂಗಾಣ ರಾಜ್ಯದ‌ ಹೈದರಾಬಾದ್, ತಾಂಡೂರು, ಜಹೀರಾಬಾದ್ ವಿವಿಧ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ಜನಮನ ಸೆಳೆಯುವ ಮಾಣಿಕಪುರ ಜಲಪಾತ: ಚಿಂಚೋಳಿ ತಾಲೂಕಿನ ಇನ್ನೊಂದಡೆ ಇರುವ ಮಾಣಿಕಪುರ ಜಲಪಾತ ಕೂಡಾ ಪ್ರವಾಸಿಗರ ಪಾಲಿಗೆ ವರವಾಗಿ ನಿಂತಿದೆ. ಜನವಸತಿ ರಹಿತವಾಗಿರುವ ಹಾಳೂರು ಮಾಣಿಕಪುರದ ಹತ್ತಿರ ಜಲಪಾತ ಇರುವುದರಿಂದ ಅದನ್ನು ಮಾಣಿಕಪುರ ಜಲಪಾತವೆಂದೇ ಕರೆಯಲಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಇದು ಮೈದುಂಬಿಕೊಳ್ಳುತ್ತದೆ. ಇಲ್ಲಿಗೆ ಹೋಗಲು ಸರಿಯಾದ ರಸ್ತೆಯಿಲ್ಲ. ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗಬೇಕಾಗುತ್ತದೆ. ಇಲ್ಲಿರುವ ಕಚ್ಚಾ ರಸ್ತೆಯ ಮೂಲಕ ಕಾಡಿನ ಮಧ್ಯೆ ಸುಮಾರು 3 ಕಿ.ಮೀ. ಸಾಗಬೇಕಾಗುತ್ತದೆ. ಪ್ರಯಾಣವು ವಿಭಿನ್ನವಾದ ಅನುಭವ ನೀಡುತ್ತದೆ.

ಇದನ್ನೂ ಓದಿ: ಹೊರಹರಿವು ಹೆಚ್ಚಳ: ಹೊಗೆನಕಲ್​ನಲ್ಲಿ ಕಾವೇರಿ ಜಲವೈಯಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.