ಕಲಬುರಗಿ : ಮಾಜಿ ಸೈನಿಕರನ್ನು ಇಎಸ್ಐ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಸ್ವಾಭಿಮಾನಿ ಜನತಾ ಸಂಘ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ನಗರದ ಇಎಸ್ಐ ಆಸ್ಪತ್ರೆ ಎದುರು ಧರಣಿ ನಡೆಸಿದ ನಿವೃತ್ತ ಸೈನಿಕರು, ನಿವೃತ್ತಿಯ ನಂತರ ನಮ್ಮ ಜೀವನದ ಆಧಾರವಾಗಿರುವ ಸೆಕ್ಯೂರಿಟಿ ಗಾರ್ಡ್ ಕೆಲಸ ಏಕಾಏಕಿ ನಮ್ಮಿಂದ ಕಿತ್ತುಕೊಳಲಾಗಿದೆ. ಆಸ್ಪತ್ರೆಯ ಡೀನ್ ಒಳಸಂಚು ರೂಪಿಸಿ ನಮನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಆರೋಪಿಸಿದರು.
371ಜೆ ಪ್ರಕಾರ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು, ಆದರೆ ಹೊರರಾಜ್ಯದ ಕೆಲಸಗಾರರನ್ನು ಕರೆಸಿಕೊಳಲಾಗಿದೆ. ಆದ್ದರಿಂದ ಕೂಡಲೆ ನಿವೃತ್ತ ಸೈನಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳುಬೇಕು ಹಾಗೂ ಇಎಸ್ ಐ ಸಿ ಆಸ್ಪತ್ರೆ ಡೀನ್ನ್ನು ಕೆಲಸದಿಂದ ವಜಾಗೊಳಿಸಿವಂತೆ ಆಗ್ರಹಿಸಿದರು.