ಕಲಬುರಗಿ: ಚಿಂಚೋಳಿ ತಾಲೂಕು ಸಂಗಾಪೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ.
ರಮೇಶ ರಾಥೋಡ್ (27) ಬಂಧಿತ ಆರೋಪಿ. ಈತನ ತಂದೆ ಚಂದರ್ ರಾಥೋಡ್ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಚಂದರ್, ಸಂಗಾಪೂರ ಗ್ರಾಮದಲ್ಲಿರುವ ತನ್ನ ಹೊಲದಲ್ಲಿ ಕಬ್ಬು ಬೆಳೆದಿದ್ದು, ಇದರ ಮಧ್ಯೆ ಗಾಂಜಾ ಬೆಳೆದಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 88 ಕೆಜಿ ಗಾಂಜಾ ಗಿಡ ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.