ಕಲಬುರಗಿ: ಮೊಬೈಲ್ ಅಂಗಡಿಗೆ ಕನ್ನ ಹಾಕಿದ್ದ ಅಂತಾರಾಜ್ಯ ಖದೀಮರನ್ನು ಬಂಧಿಸುವಲ್ಲಿ ನಗರದ ಬ್ರಹ್ಮಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹ್ಮದ್ ತಬ್ರೆಜ್ ದಾವೂದ್ ಶೇಖ (38), ಫರಾಹನ್ ಶೇಖ್ (33), ರಷೀದ್ ಅಹ್ಮದ್ (29), ರಾಜು ಪಾಂಡುರಂಗ ಅಂಬೇಕರ್ (49) ಮತ್ತು ಜಾವೀದ್ ಖಾನ್ (30) ಬಂಧಿತ ಆರೋಪಿತರು.
ಓದಿ: ಬೆಂಗಳೂರು: ಒಂದೇ ಕಾಲೇಜಿನ 40 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಕಳೆದ ವರ್ಷ ಅಕ್ಟೋಬರ್ 16ರ ರಾತ್ರಿ ವೇಳೆ, ಸೂಪರ್ ಮಾರ್ಕೆಟ್ ನಲ್ಲಿರುವ ದಿ ಮೊಬೈಲ್ ಮಾಸ್ಟರ್ ಶಾಪ್ಗೆ ಖದೀಮರು ಕನ್ನ ಹಾಕಿದ್ದರು. ಬೆಲೆ ಬಾಳುವ ಮೊಬೈಲ್ ಮತ್ತು ಇತರ ಸಾಮಗ್ರಿಗಳು ಸೇರಿ ಸುಮಾರು 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದರು.
ಕಳ್ಳತನ ದೂರು ದಾಖಲಾದ ಬೆನ್ನಲ್ಲೇ ಅಲರ್ಟ್ ಆದ ಬ್ರಹ್ಮಪುರ ಠಾಣೆ ಪೊಲೀಸರು, ಆರೋಪಿಗಳ ಜಾಡು ಹಿಡಿದು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ ಬೆಲೆ ಬಾಳುವ 18 ಮೊಬೈಲ್ ಗಳು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.