ETV Bharat / state

ಬಿಸಿಎಂ ಅಧಿಕಾರಿ ಕಿರಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ

ಬಿಸಿಎಂ ಅಧಿಕಾರಿಯ‌ ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿ ಗ್ರೂಪ್ ನೌಕರನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೇಡಂ ಪಟ್ಟಣದಲ್ಲಿ ನಡೆದಿದೆ.

D Group employee  attempt suicide at sedam
ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ
author img

By

Published : Apr 3, 2021, 7:45 PM IST

ಸೇಡಂ: ಬಿಸಿಎಂ ಅಧಿಕಾರಿಯ‌ ಕಿರಕುಳಕ್ಕೆ ಬೇಸತ್ತು ಡಿ ಗ್ರೂಪ್ ನೌಕರನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಪಟ್ಟಣದಲ್ಲಿ ಜರುಗಿದೆ.

ಶ್ರೀಕಾಂತರೆಡ್ಡಿ ಹಣಮಂತರೆಡ್ಡಿ (25) ಎಂಬಾತ ಕೀಟನಾಶಕ ಸೇವಿಸಿದ್ದು, ಸೇಡಂ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಡಿ ಗ್ರೂಪ ನೌಕರ ಶ್ರೀಕಾಂತರೆಡ್ಡಿಗೆ ವಿನಾಕಾರಣ ಮಾನಸಿಕ ಕಿರುಕುಳ ನೀಡಿದ ಬಿಸಿಎಂ ಅಧಿಕಾರಿ ಬಸವರಾಜ ಪಳೋಜಿ ಕೆಲ ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿರುವುದು ತಿಳಿದು ಬಂದಿದೆ. ಹಲವಾರು ಬಾರಿ ಫೋನ್ ಕರೆ ಮಾಡಿದರೂ ಸಹ ಸ್ಪಂದಿಸದ ಪರಿಣಾಮ ಶ್ರೀಕಾಂತ್ ರೆಡ್ಡಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೋರಾಟದ ಎಚ್ಚರಿಕೆ:

ಬಿಸಿಎಂ ತಾಲೂಕು ಅಧಿಕಾರಿ ಬಸವರಾಜ ವಿನಾಕಾರಣ ಸಿಬ್ಬಂದಿಗೆ ಕಿರುಕುಳ ನೀಡಿ, ಕರ್ತವ್ಯ ಲೋಪ ಎಸಗಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆತ್ಮಹತ್ಯೆಗೆ ಯತ್ನಿಸಿದ ಶ್ರೀಕಾಂತರೆಡ್ಡಿ ಪೋಷಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.