ETV Bharat / state

ಕ್ಷುಲ್ಲಕ ಕಾರಣಕ್ಕೆ ಜಗಳ, ಹಲ್ಲೆ: ಮನನೊಂದ 10ನೇ ತರಗತಿ‌ ವಿದ್ಯಾರ್ಥಿ ಆತ್ಮಹತ್ಯೆ - kamalapur taluk of kalaburagi

ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಇದರಿಂದ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಕೊರಿಕೋಟಾ ಗ್ರಾಮದಲ್ಲಿ ನಡೆದಿದೆ

crime-minor-boy-committed-suicide-in-kamalapur-taluk-of-kalaburagi
ಕ್ಷುಲ್ಲಕ ಕಾರಣಕ್ಕೆ ಜಗಳ, ಹಲ್ಲೆ: ಮನನೊಂದ 10ನೇ ತರಗತಿ‌ ವಿದ್ಯಾರ್ಥಿ ಆತ್ಮಹತ್ಯೆ
author img

By

Published : Jul 3, 2023, 8:17 PM IST

ಕಲಬುರಗಿ: ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕೊರಿಕೋಟಾ ಗ್ರಾಮದಲ್ಲಿ ನಡೆದಿದೆ. ಕೆಲ ಯುವಕರು ಸೇರಿ ವಿನಾಃಕಾರಣ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕುರಿಕೋಟಾ ಗ್ರಾಮದ ಪ್ರಶಾಂತ ಅಷ್ಟಗಿ (16) ಆತ್ಮಹತ್ಯೆಗೆ ಮಾಡಿಕೊಂಡ ಬಾಲಕ. ಈತ ಅವರಾದ (ಬಿ) ಪ್ರೌಢ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. 'ಕುರಿಕೋಟಾ ಗ್ರಾಮದ ಯುವಕ ಸೋಹಿಲ್ ಹಾಗೂ ಆತನ ಕಲಬುರಗಿಯ ಕೆಲ ಸ್ನೇಹಿತರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಹಲ್ಲೆ ಮಾಡಿದ್ದರು. ಇದರಿಂದ ಮನನೊಂದ ಪ್ರಶಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿತರ ವಿರುದ್ಧ ಕ್ರಮ‌ ಕೈಗೊಳ್ಳಬೇಕು' ಎಂದು ಆಗ್ರಹಿಸಿ ಮಹಾಗಾಂವ ಪೊಲೀಸ್​​ ಠಾಣೆಯಲ್ಲಿ ಮೃತ ಬಾಲಕನ ತಂದೆ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ? : 'ಆತ್ಮಹತ್ಯೆ ಮಾಡಿಕೊಂಡ ಪ್ರಶಾಂತ ಹಾಗೂ ಈತನ ಸೋದರತ್ತೆ ಮಗನ ಜೊತೆ ಸೇರಿಕೊಂಡು ಮೇವು ತರಲೆಂದು ಎತ್ತಿನ ಬಂಡಿ ಹೂಡಿಕೊಂಡು ಹೊಲಕ್ಕೆ ಹೋಗಿದ್ದಾರೆ. ಆಗ ಹೊಲದ ಪಕ್ಕದಲ್ಲೇ ಆರೋಪಿ ಸೋಹಿಲ್ ಹಾಗೂ ಆತನ ಸಹಚರರು ಮದ್ಯ ಸೇವಿಸುತ್ತ ಕುಳಿತಿದ್ದರಂತೆ. ಆಗ ಪ್ರಶಾಂತನನ್ನು ನೋಡಿ ಈತನ ಬಳಿ‌ ಬಂದವರೇ ವಿನಾಕಾರಣ ಜಗಳ ತೆಗೆದಿದ್ದಾರೆ. ಜೊತೆಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು ತಮ್ಮ ಮಗನ ಮೇಲೆ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.

'ಮನೆಗೆ ಬಂದ ಪ್ರಶಾಂತ ತನ್ನ ತಂದೆಗೆ ವಿಷಯ ತಿಳಿಸಿ ಅವರ ವಿರುದ್ಧ ಠಾಣೆಗೆ ದೂರು ನೀಡಲು ಒತ್ತಾಯಿಸಿದ್ದಾನೆ. ಆದರೆ, ಪ್ರಶಾಂತನ ತಂದೆ ಮೈಲಾರಿ ದೂರು‌ ಕೊಡುವುದು ಬೇಡ, ಸೋಹಿಲ್ ತಂದೆಗೆ ಹೇಳೋಣ ಅಂತ ಹೇಳಿ, ಸೋಹಿಲ್ ತಂದೆಗೆ ಆಗಿರುವ ಘಟನೆ ಬಗ್ಗೆ ಹೇಳಿ ಅಷ್ಟಕ್ಕೆ ಕೈ ಬಿಟ್ಟಿದ್ದರು. ಆದರೆ, ಘಟನೆಯಿಂದ ಮನನೊಂದಿದ್ದ ಪ್ರಶಾಂತ ಸೋಮವಾರ ಜಾನುವಾರಗಳ ಜೊತೆಗೆ ಹೊಲಕ್ಕೆ ತೆರಳಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮಹಾಗಾಂವ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಅನ್ಯಜಾತಿ ನೆಪವೊಡ್ಡಿ ಮದುವೆಗೆ ನಿರಾಕರಣೆ; ಮನನೊಂದು ಯುವತಿ ಆತ್ಮಹತ್ಯೆ

ಸಾರಿಗೆ ನೌಕರ ಆತ್ಮಹತ್ಯೆ: ಪ್ರತ್ಯೇಕ ಪ್ರಕರಣವೊಂದರಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ಡಿಪೋದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ರಾಣೆಬೆನ್ನೂರಿನ ಮಾಗಡಿ ರಸ್ತೆಯಲ್ಲಿನ ಬಸ್ ಡಿಪೋದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ ನಿವಾಸಿ ಮಲ್ಲನಗೌಡ ಬಡಿಗೇರ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಡ್ರೈವರ್​ ಕಂ ಕಂಡಕ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅವರು ಸೂಕ್ತ ತನಿಖೆ ನಡೆಸುವಂತೆ ಅದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.