ETV Bharat / state

ಕುಷ್ಠರೋಗಿಗಳ ಪಾಲಿನ ದೇವರು ಈ ಬಸಮ್ಮ ದೇವನೂರು ದಂಪತಿ..!

author img

By

Published : Jan 19, 2021, 1:50 PM IST

Updated : Jan 19, 2021, 8:17 PM IST

ಯಾವುದೇ ಫಲಾಪೇಕ್ಷೆ ಇಲ್ಲದೇ ಕುಷ್ಠರೋಗಿಗಳ ಸೇವೆ ಮಾಡುತ್ತಿರುವ ಬಸಮ್ಮ ದೇವನೂರ ದಂಪತಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕುಷ್ಠರೋಗಿಗಳ ಪಾಲಿನ ದೇವರು ಬಸಮ್ಮ ದೇವನೂರ ದಂಪತಿ

ಕಲಬುರಗಿ: ಈಕೆಯ ಹೆಸರು ಬಸಮ್ಮ ದೇವನೂರ. ಸಾಮಾನ್ಯ ಮಹಿಳೆಯಾಗಿದ್ರೂ, ಕುಷ್ಠರೋಗಿಗಳ ಪಾಲಿಗೆ ಇವರು ದೇವತೆ. ಕಲಬುರಗಿಯ ಮಹಾತ್ಮಗಾಂಧಿ ನಿವಾಸಿಯಾಗಿರುವ ಇವರು, ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ. ಈ ರೋಗವಿರುವ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ಇಡೀ ಸಮಾಜಕ್ಕೆ ಬಸಮ್ಮ ಮಾದರಿಯಾಗಿದ್ದಾರೆ.

ಬಸಮ್ಮ ಪತಿ ಹಣಮಂತ ದೇವನೂರರ ತಂದೆ ತಾಯಿ ಕುಷ್ಠರೋಗದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿರಲಿಲ್ಲ. ವೈದ್ಯರು ಕೂಡ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ದೂರದಿಂದಲೇ ಚಿಕಿತ್ಸೆ ನೀಡುತ್ತಿದ್ದರು. ಕುಷ್ಠರೋಗ ಪೀಡಿತ ಗರ್ಭಿಣಿಯರಂತೂ ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆಸ್ಪತ್ರೆಗೆ ಹೋದ್ರೆ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಮುಟ್ಟಿಸಿಕೊಳ್ಳದೇ ಎಲ್ಲವನ್ನು ಅವರಿಂದಲೇ ಮಾಡಿಸುತ್ತಿದ್ದರು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಬಸಮ್ಮ ಇದನ್ನು ಕಣ್ಣಾರೆ ಕಂಡು ಮನೆಯಲ್ಲಿಯೇ ತಾವೇ ಹೆರಿಗೆ ಮಾಡುವ ಕಾಯಕ ಆರಂಭಿಸಿದರು. ಸುಮಾರು 25 ವರ್ಷಗಳಿಂದ ಕುಷ್ಠರೋಗವಿರುವ ಗರ್ಭಿಣಿಯರಿಗೆ ಇವರೇ ಹೆರಿಗೆ ಮಾಡಿಸುತ್ತಿದ್ದಾರೆ. ಇಲ್ಲಿ ತನಕ 50 ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.

ಪತ್ನಿ ಬಸಮ್ಮ ಕುಷ್ಠರೋಗವಿರುವ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ್ರೆ, ಅವರ ಪತಿ ಹಣಮಂತ ಆಟೋ ಓಡಿಸಿ, ಬಂದ ಹಣದಿಂದಲೇ ಔಷಧ ಖರೀದಿಸುತ್ತಾರೆ. ಅವರು ವಾಸಿಸುವ ಕಾಲೊನಿಯಲ್ಲೇ ಚಿಕ್ಕದೊಂದು ಆಸ್ಪತ್ರೆ ನಿರ್ಮಿಸಿ, ಗಾಯಗಳಿಗೆ ಔಷಧ ಹಚ್ಚಿ ಪಟ್ಟಿ ಕಟ್ಟುತ್ತಾರೆ. ಕುಟುಂಬದಿಂದ ನಿರ್ಲಕ್ಷಿಸಲ್ಪಟ್ಟವರಿಗೆ ಆಶ್ರಯ ನೀಡಿ ಚಿಕಿತ್ಸೆ ನೀಡುತ್ತಾರೆ. ಸದ್ಯ ಈ ಆಸ್ಪತ್ರೆಯಲ್ಲಿ 200 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸಮ್ಮ ಮತ್ತು ಹಣಮಂತ ದಂಪತಿ ಸೇವೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡಿವೆ. ಕುಷ್ಠರೋಗಿಗಳ ಸೇವೆ ಮಾತ್ರವಲ್ಲ ಇಲ್ಲಿಯ ಜನಕ್ಕೆ ಸ್ವಯಂ ಉದ್ಯೋಗ ಕೊಡಿಸುವ ಕೆಲಸ ಮಾಡಿ ಸ್ವಾವಲಂಬಿ ಜೀವನ ನಡೆಸುವುದಕ್ಕೂ ಸಹಾಯ ಮಾಡ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ

Last Updated : Jan 19, 2021, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.