ಕಲಬುರಗಿ: ಜಿಲ್ಲೆಯಲ್ಲಿಂದು 161 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11,712ಕ್ಕೆ ಏರಿಕೆಯಾಗಿದೆ.
ಇಂದು ಕೊರೊನಾಗೆ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ. 38 ಜನರು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 9,518 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ 1,984 ಸಕ್ರಿಯ ಪ್ರಕರಣಗಳಿವೆ.
ಕಲಬುರಗಿಯ ಖಾಜಾ ಕಾಲೋನಿಯ 76 ವರ್ಷದ ವೃದ್ದ, ಆನಂದ ನಗರದ 74 ವರ್ಷದ ವೃದ್ದ, ಹಳೆ ಜೇವರ್ಗಿ ರಸ್ತೆಯಲ್ಲಿರುವ ಗಣೇಶ ನಗರದ 82 ವರ್ಷದ ವೃದ್ದ ಹಾಗೂ ಕಮಲಾಪುರ ತಾಲೂಕಿನ ಸ್ವಂತ ಗ್ರಾಮದ 73 ವರ್ಷದ ವೃದ್ದೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.