ETV Bharat / state

ಕಲಬುರಗಿ: ರೈತ ಹೋರಾಟಗಾರರ ಮೇಲಿನ ಅಮಾನುಷ ವರ್ತನೆಗೆ ಖಂಡನೆ - protest against railway privatisation in kalaburagi

ಅಖಿಲ ಭಾರತ ಕಿಸಾನ್​ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ಹರಿಯಾಣ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Condemnation for inhumane behavior on fighters.
ಹೋರಾಟಗಾರರ ಮೇಲಿನ ಅಮಾನುಷ ವರ್ತನೆಗೆ ಖಂಡನೆ
author img

By

Published : Nov 27, 2020, 3:36 PM IST

ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಖಂಡಿಸಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಶಾಂತಿಯುತ ಪ್ರತಿಭಟನೆಗೆ ಹೊರಟಿದ್ದ ರೈತರನ್ನು ತಡೆದು ಅಮಾನುಷವಾಗಿ ವರ್ತನೆಗೆ ಖಂಡನೆ ಹಾಗೂ ರೈಲ್ವೆ ಖಾಸಗೀಕರಣ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ಕಿಸಾನ್​ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ಹರಿಯಾಣ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರ ಮೇಲಿನ ಅಮಾನುಷ ವರ್ತನೆಗೆ ಖಂಡನೆ

ಇದನ್ನೂ ಓದಿ: ಗೋವಾದಲ್ಲಿ ಶಾಸಕಿ ಹೆಬ್ಬಾಳ್ಕರ್ ಪುತ್ರನ ಅದ್ದೂರಿ ವಿವಾಹ.. ಸಿದ್ದು, ಡಿಕೆಶಿ ಸೇರಿ ಗಣ್ಯರು ಭಾಗಿ

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಆಯೋಜಿಸಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಪಂಜಾಬ್ ಹಾಗೂ ಹರಿಯಾಣ ಮೂಲದ ರೈತರನ್ನು ಶಂಭು ಗಡಿಯಲ್ಲಿ ತಡೆದು ಜಲಫಿರಂಗಿ ಪ್ರಯೋಗಿಸಿದ್ದಲ್ಲದೆ ರೈತರನ್ನು ಬಂಧಿಸಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು.

ಕೂಡಲೇ ಬಂಧಿತ ರೈತರನ್ನು ಬಿಡುಗಡೆಗೊಳಿಸುವಂತೆ ಹಾಗೂ ಕೃಷಿ ಕಾಯ್ದೆ ವಾಪಸ್ ಪಡೆಯುವುದು, ರೈಲ್ವೆ ಖಾಸಗೀಕರಣ ಕೈಬಿಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.