ETV Bharat / state

ನಾಮಪತ್ರ ತಿರಸ್ಕಾರ ಮಾಡಿಸುವ ಕುತಂತ್ರ ನಡೆದಿದೆ ಎಂಬ ಡಿಕೆ ಸುರೇಶ್​ ಹೇಳಿಕೆಗೆ ಸಿಎಂ ತಿರುಗೇಟು - ಕರ್ನಾಟಕ ವಿಧಾನಸಭಾ ಚುನಾವಣೆ

ಸಂಸದ ಡಿಕೆ ಸುರೇಶ್​ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಅಫಜಲಪುರದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್​ನವರಲ್ಲಿ ಅಸ್ಥಿರತೆ ಕಾಡುತ್ತಿದೆ ಎಂದರು.

CM Bommai reaction about DK Suresh statement

author img

By

Published : Apr 20, 2023, 7:49 PM IST

Updated : Apr 20, 2023, 10:53 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕಲಬುರಗಿ: ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರ ನಾಮಪತ್ರ ತಿರಸ್ಕಾರ ಮಾಡಿಸುವ ಕುತಂತ್ರ ನಡೆದಿದೆ ಎಂಬ ಸಂಸದ ಡಿಕೆ ಸುರೇಶ್​ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಕುರಿತು ಅಫಜಲಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾಮಪತ್ರ ತಿರಸ್ಕಾರ ಮಾಡುವ ಕೆಲಸ ಬಿಜೆಪಿ ಮಾಡುವುದಿಲ್ಲ, ಅದು ಚುನಾವಣಾ ಆಯೋಗ ಮಾಡುತ್ತದೆ. ತಾವು ಮಾಡಿರುವ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಅವರ ನಾಮಪತ್ರ ಎಲ್ಲವೂ ಕಾನೂನು ಪ್ರಕಾರ ಇದ್ದರೆ ಅವರೇಕೆ ಭಯಪಡಬೇಕು? ರಾಜಕೀಯವಾಗಿ ಕಾಂಗ್ರೆಸ್​ನವರಲ್ಲಿ ಎಷ್ಟು ಅಸ್ಥಿರತೆ ಇದೆ ಎನ್ನುವುದು ಇದು ತೋರಿಸುತ್ತದೆ. ಕಾನೂನಾತ್ಮಕವಾಗಿ ಡಿಕೆಶಿ ನಾಮಪತ್ರ ರಿಜೆಕ್ಟ್ ಆಗಬಹುದು ಎನ್ನುವ ಭಯ ಅವರಲ್ಲಿ ಕಾಡುತ್ತಿದೆ. ಹಾಗಾಗಿ, ಡಿಕೆ ಸುರೇಶ್ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಇದನ್ನು ಓದಿ: ಕಾಂಗ್ರೆಸ್ ಮೂಲಭೂತವಾದಿಗಳನ್ನು ಆಮದು ಮಾಡ್ತಿದೆ: ಸುಧಾಂಶು ತ್ರಿವೇದಿ ಗಂಭೀರ ಆರೋಪ

ಇಬ್ಬರು ಪಕ್ಷ ಬಿಟ್ಟರೆ ಲಿಂಗಾಯತ ವಿರೋಧಿ ಅನ್ನೋಕಾಗತ್ತಾ? ಲಿಂಗಾಯತ ಸಮುದಾಯದ ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರುವುದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಪರಿಣಾಮ ಆಗೋದಿಲ್ಲ. ಇಬ್ಬರು ನಾಯಕರು ಪಕ್ಷ ಬಿಟ್ಟ ಕಾರಣ ಲಿಂಗಾಯತ ವಿರೋಧಿ ಅನ್ನೋಕಾಗಲ್ಲ. ನಾವು 70ಕ್ಕೂ ಹೆಚ್ಚು ಲಿಂಗಾಯತ ಮುಖಂಡರಿಗೆ ಟಿಕೆಟ್ ಕೊಟ್ಟಿದ್ದೇವೆ. ಯಡಿಯೂರಪ್ಪ ಅವರಂತಹ ಮೇರು ನಾಯಕರು ನಮ್ಮ ಜೊತೆ ಇದ್ದಾರೆ. ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯವರು ನಮ್ಮ ಜೊತೆಗೆ ಇದ್ದಾರೆ. ಕಳೆದ ಬಾರಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್, ಜನರು ಇದನ್ನು ಮರೆತೆ ಬಿಡುತ್ತಾರಾ? ಬಿಜೆಪಿ ಲಿಂಗಾಯತ ವಿರೋಧಿ ಎನ್ನುವ ಅಪಪ್ರಚಾರದಲ್ಲಿ ಹುರುಳಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಆರೋಪ ತಳ್ಳಿ ಹಾಕಿದರು.

ಎಲ್ಲಿದೆ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯ?- ಸಿಎ ಬಸವರಾಜ ಬೊಮ್ಮಾಯಿ ಪ್ರಶ್ನೆ: ಇದೇ ವೇಳೆ ಅಫಜಲಪುರದಲ್ಲಿ ಹಮ್ಕಿಕೊಂಡ ಸಮಾವೇಶದಲ್ಲಿ ಭಾಗಿಯಾಗಿ ಸಾರ್ವಜನಿಕರನ್ನ ಉದ್ದೇಶಿಸಿ ಬಿಜೆಪಿ ಪ್ರಚಾರ ಸಮಿತಿ ಮುಖಂಡರೂ ಆದ ಸಿಎಂ ಮಾತನಾಡಿದರು. ಮಾತೆತ್ತಿದರೆ ಸಾಮಾಜಿಕ ನ್ಯಾಯ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಯಾರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

  • ಇಂದು ಶರಣರ ನಾಡು, ಕಲ್ಬುರ್ಗಿಯ ಅಫ್ಜಲ್ ಪುರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ, ನಮ್ಮ ಪಕ್ಷದ ಅಭ್ಯರ್ಥಿ, ಹಿರಿಯ ನಾಯಕರಾದ ಶ್ರೀ ಮಾಲೀಕಯ್ಯ ಗುತ್ತೇದಾರ್ ರವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿದೆನು. pic.twitter.com/Fzq8FaiMMy

    — Basavaraj S Bommai (@BSBommai) April 20, 2023 " '="" class="align-text-top noRightClick twitterSection" data=" ">

ಅಲ್ಪಸಂಖ್ಯಾತ, ಹಿಂದುಳಿದ ದೀನ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ವಿನಃ ಅವರನ್ನು ಉದ್ದಾರ ಮಾಡಿಲ್ಲ. ಹಾಗಾಗಿ ಕಾಂಗ್ರೆಸ್​ಗೆ ಒಂದೂ ವೋಟ್ ಕೊಡಬಾರದು ಅಂತಾ ಮತದಾರರಿಗೆ ಸಿಎಂ ಮನವಿ ಮಾಡಿದರು. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಅಫಜಲಪುರ ಹುಲಿ ಮಾಲೀಕಯ್ಯಗೆ ಗೆಲ್ಲಿಸಿ ಅಂತಾ ಕ್ಷೇತ್ರದ ಮತದಾರರಲ್ಲಿ ಅವರು ಇದೇ ವೇಳೆ ಬಸವರಾಜ ಬೊಮ್ಮಾಯಿ ಕೇಳಿಕೊಂಡರು.

ಇದನ್ನೂ ಓದಿ: ಪದ್ಮನಾಭ ನಗರದಿಂದ ನಾಮಪತ್ರ ಸಲ್ಲಿಸದ ಡಿ.ಕೆ.ಸುರೇಶ್: ರಘುನಾಥ್ ನಾಯ್ಡು ಅಧಿಕೃತ 'ಕೈ' ಅಭ್ಯರ್ಥಿ

Last Updated : Apr 20, 2023, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.