ETV Bharat / state

ಕಲಬುರಗಿಯಲ್ಲಿ ಲಾಕ್​​ಡೌನ್​​ ಉಲ್ಲಂಘಿಸಿ ರಾತ್ರೋರಾತ್ರಿ ರಥೋತ್ಸವ! - 144 ಸೆಕ್ಸನ್

ಜಿಲ್ಲೆಯಲ್ಲಿ 144 ಸೆಕ್ಷನ್​ ಜಾರಿ ಮಾಡಿ ಯಾವುದೇ ತರಹದ ಸಭೆ ಸಮಾರಂಭ, ಉರುಸ್, ಜಾತ್ರೆ ನಡೆದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ. ಆದರೆ ಈ ನಡುವೆ ಸಾವಳಗಿಯಲ್ಲಿ ಏಪ್ರಿಲ್​ 8ರ ಮಧ್ಯರಾತ್ರಿ ಶಿವಲಿಂಗೇಶ್ವರ ರಥೋತ್ಸವ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Chariot festival held at temple in Kalburgi between lockdown
ಕಲಬುರಗಿಯಲ್ಲಿ ಲಾಕ್​​ಡೌನ್​ ಉಲ್ಲಂಘಿಸಿ ರಾತ್ರೋರಾತ್ರಿ ರಥೋತ್ಸವ
author img

By

Published : Apr 21, 2020, 9:19 PM IST

ಕಲಬುರಗಿ: ಲಾಕ್​ಡೌನ್ ಜಾರಿಯಾಗಿರುವುದರಿಂದ ಯಾರೂ ಸಹ ಮನೆಯಿಂದ ಹೊರ ಬರಬಾರದು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಈ ಆದೇಶ ಗಾಳಿಗೆ ತೂರಿ ಕೆಲವರು ಮನೆಯಿಂದ ಹೊರ ಬರುವುದು ವರದಿಯಾಗುತ್ತಿದೆ.

ಈ ನಡುವೆ ಕಲಬುರಗಿಯಲ್ಲಿ ಜಾತ್ರೆಯ ನಿಮಿತ್ತ ನೂರಾರು ಮಂದಿ ಒಟ್ಟಿಗೆ ಸೇರಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ತಾಲೂಕಿನ ಸಾವಳಗಿಯಲ್ಲಿ ಏಪ್ರಿಲ್​ 8ರ ಮಧ್ಯರಾತ್ರಿ ಶಿವಲಿಂಗೇಶ್ವರ ರಥೋತ್ಸವ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಲಾಕ್​​ಡೌನ್ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೇಡವೆಂದರೂ ಕೇಳದ ಮಠಾಧೀಶರು, ಗುರುನಾಥ ಸ್ವಾಮಿ ಎಂಬುವರ ನೇತೃತ್ವದಲ್ಲಿ ನಡುರಾತ್ರಿ ರಥೋತ್ಸವ ನಡೆಸಿರುವ ಆರೋಪ ಕೇಳಿ ಬಂದಿದೆ. ಇನ್ನು ನಿಷೇಧದ ನಡುವೆ ಗುಂಪು ಗುಂಪಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ‌ ರಥೋತ್ಸವ ಮಾಡಲಾಗಿದೆ ಎನ್ನಲಾಗಿದೆ.

ಕಲಬುರಗಿಯಲ್ಲಿ ಲಾಕ್​​ಡೌನ್​ ಉಲ್ಲಂಘಿಸಿ ರಾತ್ರೋರಾತ್ರಿ ರಥೋತ್ಸವ

ಜಿಲ್ಲೆಯಲ್ಲಿ 144 ಸೆಕ್ಷನ್​ ಜಾರಿ ಮಾಡಿ ಯಾವುದೇ ತರಹದ ಸಭೆ ಸಮಾರಂಭ, ಉರುಸ್, ಜಾತ್ರೆ ನಡೆದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ. ಈ ನಡುವೆಯೂ ಜಾತ್ರೆ ತಡೆಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ‌. ಜಾತ್ರೆ ಮಾಡಿದ ಜನರ ಬಗ್ಗೆ ಹಾಗೂ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇನ್ನು ಕೊರೊನಾ ಭೀತಿ ನಡುವೆ ರಥೋತ್ಸವ ನಡೆಸಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿಯಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.